ಯಾದಗಿರಿ: ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ (Hevay Rain In Yadagiri) ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ (Leave) ಘೋಷಣೆ ಮಾಡಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದು ಒಂದು ದಿನ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆಯಾ ತಹಶೀಲ್ದಾರ್ ಮೂಲಕ ರಜೆ ಘೋಷಣೆ ಮಾಡಿ ಆದೇಶಿಸಲಾಗಿದೆ. ಯಾದಗಿರಿ, ಸುರಪುರ, ಹುಣಸಗಿ, ಶಹಾಪುರ, ವಡಗೇರಾ ಹಾಗೂ ಗುರಮಠಕಲ್ ತಾಲೂಕಿನಾದ್ಯಂತ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಇಂದು ಕೂಡ ಹೆಚ್ಚಿನ ಪ್ರಮಾಣದ ಮಳೆ ಬರುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ (Weather Department) ನೀಡಿದೆ. ಹೀಗಾಗಿ ಮುಂಜಾಗ್ರತೆ ವಹಿಸಿ ಪ್ರಾಥಮಿಕ, ಪ್ರೌಢ, ಅನುದಾನಿತ, ಅನುದಾನ ರಹಿತ ಎಲ್ಲಾ ಶಾಲೆಗಳ ರಜೆ ಘೋಷಿಸಲಾಗಿದೆ. ರಜಾ ದಿನ ಅವಧಿ ಸರಿದೂಗಿಸಲು ಭಾನುವಾರ ಶಾಲೆಗಳನ್ನು ಯಥಾ ಪ್ರಕಾರ ನಡೆಸಲು ಸೂಚನೆ ನೀಡಲಾಗಿದೆ. ಇದನ್ನೂ ಓದಿ: ದೇವಸ್ಥಾನಗಳಿಗೆ `ಶಕ್ತಿ’ ತುಂಬಿದ ನಾರಿಯರು – ಒಂದೇ ತಿಂಗಳಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಗುರುವಾರ ತಡರಾತ್ರಿ ಜಿಲ್ಲೆಯಾದ್ಯಂತ ಸುರಿದ ಬಾರಿ ಮಳೆ ಹೊಡೆತಕ್ಕೆ ಯಾದಗಿರಿ ನಗರದ ರಸ್ತೆಗಳು ಜಲಾವೃತವಾಗಿವೆ. ಯಾದಗಿರಿ ನಗರದ ರೈಲ್ವೆ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತಗೊಂಡಿರುವುದರಿಂದ ವಾಹನ ಸವಾರರು ಪರದಾಡಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ರೈಲ್ವೆ ಸ್ಟೇಷನ್ ರಸ್ತೆ ಜಲಾವೃತಗೊಳ್ಳುತ್ತಿದ್ದು, ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
Web Stories
		

 
			
 
		 
		 
				 
				 
				 
				 
				 
				 
				 
				 
				 
				 
                                
                              
		