ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ – ಹಲವೆಡೆ ಭೂಕುಸಿತ

Public TV
1 Min Read

– ಇಂದಿನಿಂದ ನಾಲ್ಕು ದಿನ ಆರೇಂಜ್ ಅಲರ್ಟ್

ಶಿಮ್ಲಾ: ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಾಗುತ್ತಿದ್ದು, ಹಲವಡೆ ಭೂಕೂಸಿತ ಉಂಟಾಗಿದೆ.

ಭೂಕುಸಿತದಿಂದಾಗಿ ಧರ್ಮಶಾಲಾ-ಚಟಾರೊ-ಗಗ್ಗಲ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಸದ್ಯ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಭಾರೀ ಮಳೆಯಿಂದಾಗಿ ಪಾಂಡೋಹ್‌ನ ಶಾಹಿದ್ ಇಂದರ್ ಸಿಂಗ್ ಮಿಡಲ್ ಶಾಲೆಯಲ್ಲಿ ನೀರು ನಿಂತು, ಅವ್ಯವಸ್ಥೆ ಉಂಟಾಗಿದೆ.ಇದನ್ನೂ ಓದಿ:ಸ್ಟೆಪ್ ಹತ್ತಿ ಓಡೋಡಿ ಬಂದ – ಅಪರಿಚಿತನನ್ನು ನೋಡಿ ಸಲ್ಲು ಶಾಕ್‌!

ಇಂದಿನಿಂದ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಘೋಷಿಸಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಸುಂದರನಗರ, ಶಿಮ್ಲಾ ಮತ್ತು ಕಾಂಗ್ರಾದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಬಜೌರಾದಲ್ಲಿ ಗಂಟೆಗೆ 37 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ.

ಎಲ್ಲೆಲ್ಲಿ ಎಷ್ಟು ಮಳೆ?
ನಹಾನ್ – 84.7 ಮಿ.ಮೀ.
ಪಾಂಡೋಹ್ – 35 ಮಿ.ಮೀ.
ಸ್ಲಪ್ಪರ್ – 26.3 ಮಿ.ಮೀ.
ಸರಹನ್ 20.5 ಮಿ.ಮೀ.
ಪೋಂಟಾ ಸಾಹಿಬ್ – 19.8 ಮಿ.ಮೀ.
ಜೋಗಿಂದರ್‌ನಗರ – 19 ಮಿ.ಮೀ.
ಪಚ್ಚದ್ – 17.2 ಮಿ.ಮೀ.
ರಾಂಪುರ – 15.6 ಮಿ.ಮೀ.
ಗೋಹರ್ – 15 ಮಿ.ಮೀ.

ನಿರಂತರ ಮಳೆಯಿಂದಾಗಿ ದುರ್ಬಲ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಮಣ್ಣು ಕುಸಿತ ಉಂಟಾಗಬಹುದು. ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಳ್ಳಬಹುದು ಮತ್ತು ಹಾನಿಯಾಗಬಹುದು, ಇಳಿಜಾರು ರಸ್ತೆಗಳಲ್ಲಿ ಭಾರೀ ಮಳೆಯಿಂದಾಗಿ ಗೋಚರತೆ ಕಡಿಮೆಯಾಗಿ ಅಪಘಾತಗಳು ಸಂಭವಿಸಬಹುದು. ಮುಂದಿನ 2-3 ದಿನಗಳಲ್ಲಿ ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ನೈಋತ್ಯ ಮಾನ್ಸೂನ್‌ನಿಂದಾಗಿ ಮಳೆ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.ಇದನ್ನೂ ಓದಿ: ಆರನೇ ಬಾರಿಗೆ ಆಕ್ಸಿಯಮ್ ಮಿಷನ್ 4 ಮುಂದೂಡಿಕೆ- ಶುಭಾಂಶು ಅಂತರಿಕ್ಷ ಯಾನ ಮತ್ತೆ ವಿಳಂಬ

Share This Article