ಹುಬ್ಬಳ್ಳಿ, ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆ – ಸಿಡಿಲು ಬಡಿದು ವೃದ್ಧ ಸಾವು

Public TV
1 Min Read

ಹುಬ್ಬಳ್ಳಿ/ಧಾರವಾಡ: ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಹುಬ್ಬಳ್ಳಿ-ಧಾರವಾಡದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಧಾರವಾಡದಲ್ಲಿ (Dharwad) ಸತತ ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರು ಬಿತ್ತನೆಗೆ ಭೂಮಿ ಸಜ್ಜು ಮಾಡಿಕೊಳ್ಳಲು ಈ ಮಳೆ ಸಹಾಯಕವಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಇಂದು ಧಾರಾಕಾರವಾಗಿ ಮಳೆಯಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ: ಬಿರುಗಾಳಿಗೆ ಉರುಳಿ ಬಿದ್ದ ಮರ – 6 ಕ್ಕೂ ಹೆಚ್ಚು ಮಂದಿ ಸಾವು

ಇನ್ನು ಭಾರೀ ಮಳೆಯ ಹಿನ್ನೆಲೆ ಸಿಡಿಲು ಬಡಿದು ಮೇಕೆ ಮೇಯಿಸಲು ಹೋಗಿದ್ದ ವೃದ್ಧ ಸಾವನ್ನಪ್ಪಿದ್ದಾರೆ. ಧಾರವಾಡ ತಾಲೂಕಿನ ಮುಗದ ಗ್ರಾಮದ ಹೊಲದಲ್ಲಿ ಘಟನೆ ನಡೆದಿದೆ. ರಸೂಲಸಾಬ್ ಚಾಂದವಾಲೆ (62) ಮೃತ ದುರ್ದೈವಿ. ಸಂಜೆ ಮೇಕೆ ಮೇಯಿಸಿಕೊಂಡು ವಾಪಸ್ ಮುಗದ ಗ್ರಾಮಕ್ಕೆ ಬರುವಾಗ ಸಿಡಿಲು ಬಡಿದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ, ದೃತರಾಷ್ಟ್ರರಲ್ಲ: ಯತ್ನಾಳ್‌

ಹುಬ್ಬಳ್ಳಿಯ ನವನಗರ, ವಿದ್ಯಾನಗರ, ದೇಶಪಾಂಡೆ ನಗರದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಕೇಶ್ವಾಪುರದ ಕೆಲವು ಕಡೆ ಸಣ್ಣ ಪ್ರಮಾಣದ ಆಲಿಕಲ್ಲು ಸಹಿತ ಮಳೆಯಾಗಿದ್ದು, ಮಳೆ ಹಿನ್ನೆಲೆ ಹುಬ್ಬಳ್ಳಿ ನಗರದ ವಿದ್ಯುತ್ ಕಡಿತಗೊಂಡಿದೆ. ಸತತ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ಚರಂಡಿ ತುಂಬಿ ಕೊಳಚೆ ನೀರು ಮುಖ್ಯ ರಸ್ತೆಗೆ ಹರಿದಿದೆ. ಅಲ್ಲದೇ ಪ್ರಮುಖ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ದೆಹಲಿಗೆ ಹೋಗುವ ಮುನ್ನ ಸಿಎಂ, ಡಿಸಿಎಂ ಮೀಟಿಂಗ್

Share This Article