ಮಳೆಗೆ ಧರೆಗುರುಳಿದ ಮರ – ದೇವಾಲಯದ ಗೋಪುರ, ವಿಗ್ರಹಕ್ಕೆ ಹಾನಿ

Public TV
1 Min Read

ಮಂಡ್ಯ: ಸತತ ಮಳೆಗೆ (Rain) ದೇಗುಲದ (Temple) ಮೇಲೆ ಮರ ಉರುಳಿ ಬಿದ್ದಿದ್ದು, ದೇವಾಲಯದ ಗೋಪುರ ಹಾಗೂ ವಿಗ್ರಹಕ್ಕೆ ಹಾನಿಯಾದ ಘಟನೆ ಪಾಂಡವಪುರ (Pandavapura) ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಡೆದಿದೆ.

ಮರ ಬಿದ್ದಿದದರಿಂದ ಗ್ರಾಮದ ಚೆನ್ನಿಗರಾಯ ದೇಗುಲದ ಗೋಪುರ ಮುರಿದಿದೆ. ಇತ್ತೀಚೆಗಷ್ಟೆ ಲಕ್ಷಾಂತರ ರೂ. ವೆಚ್ಚದಲ್ಲಿ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಇದೀಗ ಮಳೆಯಿಂದ ದೇಗುಲಕ್ಕೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಇದನ್ನೂ ಓದಿ: ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

ದೇಗುಲದ ಗೋಪರ ಹಾಗೂ ವಿಗ್ರಹ ಭಿನ್ನವಾಗಿರುವುದರಿಂದ ಗ್ರಾಮದ ಜನರಲ್ಲಿ ಆತಂಕ ಮೂಡಿದೆ. ಏನಾದರೂ ಕೆಟ್ಟ ಮುನ್ಸೂಚನೆಯೇ ಎಂದು ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಡಿಸಿ, ಸಿಇಓಗಳ ಸಭೆಗೆ ತಡವಾಗಿ ಬಂದ ಡಿಸಿಎಂ, ಸಚಿವರು – ಸಿಎಂ ಸಿದ್ದರಾಮಯ್ಯ ಗರಂ

Share This Article