ಮುಂದಿನ 3 ಗಂಟೆಯಲ್ಲಿ ಬೆಂಗಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

1 Min Read

ಬೆಂಗಳೂರು: ಮುಂದಿನ ಮೂರು ಗಂಟೆಯಲ್ಲಿ ಬೆಂಗಳೂರಿನಲ್ಲಿ (Bengaluru) ಭಾರೀ ಮಳೆ (Heavy Rain) ಬೀಳುವ ಸಾಧ್ಯತೆಯಿದೆ.

ಮುಂದಿನ ಮೂರು ಗಂಟೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ರಾಮನಗರ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಇದನ್ನೂ ಓದಿ: ನನ್ನ ಸ್ನೇಹಿತೆ ಜೊತೆಗೂ ಸೇರು.. ಪತ್ನಿಯ ವಿಕೃತ ಸೆಕ್ಸ್‌ ದಾಹಕ್ಕೆ ಬೇಸತ್ತು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತಿ

 

ಒಂದು ಅಥವಾ ಎರಡು ಸ್ಥಳಗಳಲ್ಲಿ ಮಳೆ, ಗುಡುಗು, ಆಲಿಕಲ್ಲ ಮಳೆಯಾಗಲಿದೆ. ಗಾಳಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ನೆಲಮಂಗಲ ಬಳಿ ಸರಣಿ ಅಪಘಾತ – ರೊಚ್ಚಿಗೆದ್ದ ಸವಾರರಿಂದ KSRTC ಚಾಲಕನಿಗೆ ಥಳಿತ

ಪ್ರಯಾಣಿಸುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಿ, ಕೊಯ್ಲು ಮಾಡಿದ ಬೆಳೆಗಳು ಇದ್ದರೆ ತೆರೆದ ಸ್ಥಳದಲ್ಲಿ ಇಡಬೇಡಿ ಎಂದು ಸೂಚಿಸಿದೆ.
Share This Article