ಅಕಾಲಿಕ ಮಳೆಯಿಂದ ಹಲವೆಡೆ ಅವಾಂತರ- ಹುಬ್ಬಳ್ಳಿಯಲ್ಲಿ ಬಿರುಗಾಳಿಗೆ ಪರದಾಡಿದ ವಿದ್ಯಾರ್ಥಿನಿಯರು

By
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಸೇರಿ ರಾಜ್ಯದ ಹಲವೆಡೆ ಅಕಾಲಿಕ ಮಳೆಯ ಅಬ್ಬರ ಅವಾಂತರ ಮುಂದುವರಿದಿದೆ. ಇಂದು ಮಧ್ಯಾಹ್ನ ಸಿಲಿಕಾನ್ ಸಿಟಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ವಾಹನ ಸವಾರರು ಪರದಾಡಿದ್ರು.

ಬುಧವಾರ ರಾತ್ರಿ ಹುಬ್ಬಳ್ಳಿಯಲ್ಲಿ ರಣಭೀಕರ ಬಿರುಗಾಳಿ, ಮಳೆಗೆ ಕಿಮ್ಸ್ ಆಸ್ಪತ್ರೆಯ ತಾತ್ಕಾಲಿಕ ಮೇಲ್ಛಾವಣಿ ಕಿತ್ತು ಹೋಗಿದೆ. ಆಸ್ಪತ್ರೆಯ ಡೋರ್, ಕಿಟಕಿಯ ಗಾಜುಗಳು ಪೀಸ್ ಪೀಸ್ ಆಗಿವೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಂತೂ ಬಿರುಗಾಳಿಗೆ ಸಿಲುಕಿ ವಿದ್ಯಾರ್ಥಿನಿಯರು ಒದ್ದಾಡಿದ್ರು. ಇನ್ನು ಸ್ವಲ್ಪ ಜೋರಾಗಿ ಬಿರುಗಾಳಿ ಬೀಸಿದ್ರೆ ಅವರು ಕೂಡ ಹಾರುತ್ತಿದ್ರು ಎನ್ನುವ ಸ್ಥಿತಿ ನಿರ್ಮಾಣ ಆಗಿತ್ತು.

ಬಾಗಲಕೋಟೆಯ ಕೊರ್ತಿ ಗ್ರಾಮದಲ್ಲಿ ಗಾಳಿ ಮಳೆಗೆ ಪುನರ್ವಸತಿ ಸಂತ್ರಸ್ತರ ತಾತ್ಕಾಲಿಕ ಶೆಡ್‍ಗಳು ಹಾರಿಹೋಗಿವೆ. ಅಪಾರ ಪ್ರಮಾಣದ ಧವಸಧಾನ್ಯ ನೀರುಪಾಲಾಗಿದೆ. ಚನ್ನಗಿರಿ ತಾಲೂಕಿನ ಕಣಿವೆಬಿಳಚಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆಯೊಂದು ವರುಣನ ಅಬ್ಬರಕ್ಕೆ ಮುರಿದುಬಿದ್ದಿದೆ. ಚಿಕ್ಕಮಗಳೂರಲ್ಲಿ ಬೃಹತ್ ಮರ, ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ವಾಹನ ಜಖಂ ಆಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

ಕೋಲಾರ ಜಿಲ್ಲೆಯ ಹಲವೆಡೆ ಮಳೆ ಗಾಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಚಿತ್ರದುರ್ಗ, ಮಂಡ್ಯ, ಚಾಮರಾಜನಗರದಲ್ಲಿಯೂ ಮಳೆ ಆಗಿದೆ. ಕೃಷಿ ಬೆಳೆಗಳು ನಾಶವಾಗಿವೆ. ರಾಜ್ಯದ ಹಲವೆಡೆ ಇನ್ನೂ ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *