ಶಿವಮೊಗ್ಗದಲ್ಲಿ ಭಾರೀ ಮಳೆ – ಸಿಡಿಲಿಗೆ 18 ಕುರಿಗಳು ಬಲಿ, ಹೆದ್ದಾರಿಗೆ ಬಿತ್ತು ಮರ

Public TV
1 Min Read

ಶಿವಮೊಗ್ಗ: ಜಿಲ್ಲೆಯ ಶಿವಮೊಗ್ಗ (Shivamogga), ತೀರ್ಥಹಳ್ಳಿ, ಶಿಕಾರಿಪುರ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ.

ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆಯಾಗಿದ್ದು (Rain), ಆಯನೂರು ಬಳಿ ಮರ ಬುಡಮೇಲಾಗಿ ಹೆದ್ದಾರಿಗೆ ಉರುಳಿ ಬಿದ್ದಿತ್ತು. ಇದರಿಂದಾಗಿ ಕೆಲ ಸಮಯ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು.

 

ಆಯನೂರು ಕೋಟೆ ಬಳಿ ಮೇಯಲು ಬಿಟ್ಟಿದ್ದ ಜಾಕೀರ್ ಹುಸೇನ್ ಎಂಬುವರಿಗೆ ಸೇರಿದ 18 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಸುಮಾರು 3 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ. ತಾಲೂಕಿನ ಕುಂಸಿ, ಆಯನೂರು, ಶಿವಮೊಗ್ಗ ಪಟ್ಟಣದ ವಿವಿಧೆಡೆ ಮಳೆಯಾಗಿದೆ.  ಇದನ್ನೂ ಓದಿ: ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕು – ಅಫ್ಘಾನ್ ನಿರ್ಧಾರವನ್ನು ಸ್ವಾಗತಿಸಿದ ಭಾರತ

ಇನ್ನೊಂದೆಡೆ ತೀರ್ಥಹಳ್ಳಿ, ಶಿಕಾರಿಪುರ ತಾಲೂಕಿನ ವಿವಿಧೆಡೆಯು ಮಳೆಯಾದ ವರದಿಯಾಗಿದೆ. ಇದರಿಂದ ಈ ಭಾಗದ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವು ಗ್ರಾಮಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಇದನ್ನೂ ಓದಿ: ಇರಾನ್, ಇಸ್ರೇಲ್‍ಗೆ ಪ್ರಯಾಣಿಸದಂತೆ ನಾಗರಿಕರಿಗೆ ಕೇಂದ್ರದ ಸಲಹೆ

 

Share This Article