ಉಡುಪಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

Public TV
1 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿ (Udupi Rain) ಗೆ ಮುಂಗಾರು ಪ್ರವೇಶದ ಲಕ್ಷಣಗಳು ಕಾಣಿಸಿದೆ. ಜಿಲ್ಲೆಯ ಕುಂದಾಪುರ, ಬೈಂದೂರು ಉಡುಪಿ ತಾಲೂಕಿನ ಅಲ್ಲಲ್ಲಿ ಧಾರಾಕಾರ ಮಳೆಯಾಗಿದೆ.

ಈಗಾಗಲೇ ಹವಾಮಾನ ಇಲಾಖೆ (Weather Department) ಮಳೆ ಮುನ್ಸೂಚನೆ ನೀಡಿದೆ. ರಾತ್ರಿ ಗುಡುಗು ಸಹಿತ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ವಿಪರೀತ ಬಿಸಿಲಿನಿಂದ ಕೂಡಿದ್ದ ವಾತಾವರಣ ಸ್ವಲ್ಪ ತಂಪಾಗಿದೆ. ಇದನ್ನೂ ಓದಿ: ಗೃಹಜ್ಯೋತಿ ಗೊಂದಲ ಬಗೆಹರಿದ್ರೂ ಶಾಕ್- 200 ಯುನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಬಿಲ್

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ 35 ಮಿಲಿ ಮೀಟರ್ ನಷ್ಟು ಮಳೆ ಬಿದ್ದಿದೆ. ಕಾರ್ಕಳ ಕಾಪು ತಾಲೂಕಿನ ಕೆಲವೆಡೆ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಎಲ್ಲೋ ಅಲರ್ಟ್ (Yellow Alert) ಘೋಷಣೆ ಮಾಡಲಾಗಿದೆ.

 

Share This Article