ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ – 30 ನಿಮಿಷದ ಮಳೆಗೆ ಕೆರೆಯಂತಾದ ಬೆಂಗಳೂರು

Public TV
2 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಸಂಜೆಯ ವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ವರುಣಾರ್ಭಟಕ್ಕೆ ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಇದರಿಂದ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಬೆಂಗಳೂರಿನ ಹೆಬ್ಬಾಳ, ಯಲಹಂಕ, ಯಶವಂತಪುರ, ನಾಗವಾರ, ಬಿಇಎಲ್ ಸರ್ಕಲ್ ಸಹಕಾರನಗರ ಭಾಗದಲ್ಲಿ ಭಾರೀ ಮಳೆಯಾದ ಪರಿಣಾಮ, ರಸ್ತೆಯಲ್ಲಿ ವಾಹನ ಸವಾರರು ಸಿಲುಕಿದ್ದಾರೆ. ಇನ್ನು ಬಿಇಎಲ್ ಸರ್ಕಲ್‌ನಿಂದ ಹೆಬ್ಬಾಳಕ್ಕೆ ಹೋಗುವ ಔಟರ್ ರಿಂಗ್‌ನಲ್ಲಿ ಮಳೆ ನೀರು ಕರೆಯಂತೆ ನಿಂತಿದ್ದು, ಸುಮಾರು 2 ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಇದನ್ನೂ ಓದಿ: Who Is That Preetham Gowda? ಎಂದ ಹೆಚ್‌ಡಿಕೆಗೆ ಪ್ರೀತಂ ಗೌಡ ಕೊಟ್ಟ ಉತ್ತರ ಏನು?

ಇನ್ನು ಮಳೆ ಬಂದು ಡಾಲರ್ಸ್ ಕಾಲೋನಿ ಆರ್‌ಎಂವಿ ಸೆಕೆಂಡ್ ಸ್ಟೇಜ್‌ನ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರಿನ ಹೈವೇ ಪ್ರದೇಶದಲ್ಲಿ ಒಂದಾಗಿರೋ ಡಾಲರ್ಸ್ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ಪೀಠೋಪಕರಣಗಳೆಲ್ಲ ಹಾಳಾಗಿದೆ. ಇದನ್ನೂ ಓದಿ: ಹೆಂಡತಿಯ ಹತ್ಯೆಗೈದು ಮನೆಯ ಬಾತ್‌ರೂಂನಲ್ಲಿ ಪೆಟ್ರೋಲ್ ಸುರಿದು ಸುಟ್ಟ ಪತಿ

ಭದ್ರಪ್ಪ ಲೇಔಟ್‌ನಿಂದ ಆರ್‌ಎಂವಿ ಸೆಕೆಂಡ್ ಸ್ಟೇಜ್ ಮತ್ತು ಡಾಲರ್ಸ್ ಕಾಲೋನಿಗೆ ಸಂಪರ್ಕ ಕಲ್ಪಿಸೋ ರೈಲ್ವೆ ಅಂಡರ್ ಪಾಸ್ ಸಂಪೂರ್ಣವಾಗಿ ಜಲಾವೃತವಾಗಿದ್ದು, ರಸ್ತೆ ಇದೆಯಾ ಅನ್ನುವಷ್ಟು ಮಟ್ಟಕ್ಕೆ ನೀರು ನಿಂತಿದೆ. ಬಿಬಿಎಂಪಿ ಬೆಂಗಳೂರಿನ ಅಂಡರ್ ಪಾಸ್ ನಿರ್ವಹಣೆ ಮಾಡಲು ಲಕ್ಷ ಲಕ್ಷ ಖರ್ಚು ಮಾಡಿದೆ. ಆದರೆ ಒಂದೇ ಮಳೆಗೆ ಅವರ ಕೆಲಸ ಹೇಗಿದೆ ಎಂಬುದು ಅನಾವರಣವಾಗಿದೆ. ಇದನ್ನೂ ಓದಿ: ಬೆಂಗಳೂರಿನ‌ ಗುರಪ್ಪನಪಾಳ್ಯದಲ್ಲಿ ಅಲ್-ಹಿಂದ್ ISIS ಮಾಡ್ಯೂಲ್ ಕೇಸ್‌ – NIAಯಿಂದ ಚಾರ್ಜ್ ಶೀಟ್ ಸಲ್ಲಿಕೆ

ಭಾರೀ ಮಳೆ ಸುರಿದ ಪರಿಣಾಮ ಸಂಜಯ್‌ನಗರದಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದೆ. ಬುಡ ಸಮೇತ ಮರ ನೆಲಕ್ಕುರುಳಿದ್ದು, ಕಾರೊಂದು ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಪಕ್ಕದ ಮನೆಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸಂಜೆ 5:30 ರ ವೇಳೆಗೆ ಪದ್ಮನಾಭನಗರದಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ಕಾರು ಹಾಗೂ ಆಟೋ ಜಖಂ ಆಗಿದೆ. ಪಾರ್ಕ್ ಮಾಡಿ ಅಂಗಡಿಗೆ ಹೋಗಿದ್ದಾಗ ಏಕಾಏಕಿ ಮರದ ಕೊಂಬೆ ಬಿದ್ದಿದೆ. ಸ್ಥಳಕ್ಕೆ ಹೊಯ್ಸಳ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಮೊಘಲ್‌ ದೊರೆ ಹುಮಾಯೂನ್-ರಾಣಿ ಕರ್ಣಾವತಿಯಿಂದ ಬಂತಾ ‘ರಾಖಿ ಹಬ್ಬ’; ಚರ್ಚೆ ಹುಟ್ಟುಹಾಕಿದ ಸಂಸದೆ ಸುಧಾಮೂರ್ತಿ ಪೋಸ್ಟ್‌

Share This Article