ಬೆಂಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ. ಬೆಂಗಳೂರು ನಗರದಲ್ಲಿ ಮಧ್ಯಾಹ್ನದಿಂದಲೇ ಭರ್ಜರಿಯಾಗಿ ಮಳೆ ಸುರಿದಿದೆ.
ನಗರದ ಹೊರವಲಯ ನೆಲಮಂಗಲ ದ ಬಳಿ ಭಾರೀ ವರ್ಷಧಾರೆಯಿಂದಾಗಿ ರಸ್ತೆ ಕಾಣದೇ ಕಾರೊಂದು ಡಿವೈಡರ್‍ಗೆ ಡಿಕ್ಕಿ ಹೊಡೆದ ಕಾರಣ ಇಬ್ಬರು ಸಾವನ್ನಪ್ಪಿದ್ದಾರೆ. ಸೋಲುರು ಬಳಿ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದಾರೆ.
ಕೊಡಗಿನ ಕತ್ತಲೆಕಾಡು ಬಳಿ ಸಿಡಿಲಿಗೆ ಮನೆ ಜಖಂಗೊಂಡಿದೆ. ಸಿಡಿಲು ಬಡಿದ ರಭಸಕ್ಕೆ ಮನೆಯ ಛಾವಣಿ ಪುಡಿಪುಡಿಯಾಗಿದೆ. ಹಾವೇರಿಯ ಸವಣೂರು ತಾಲೂಕಿನ ಕುರಬರಮಲ್ಲೂರ ಗ್ರಾಮದ ಬಳಿ ಇರೋ ಬಾಜಿರಾಯನಹಳ್ಳ ತುಂಬಿ ಹರಿಯುತ್ತಿದೆ. ಬ್ರಿಡ್ಜ್ ಮೇಲೆ ನೀರು ಹರಿಯುತ್ತಿರೋದ್ರಿಂದ ವಾಹನ ಸವಾರರಿಗೆ ತೊಂದರೆಯಾಯ್ತು.
ಆನೇಕಲ್, ರಾಮನಗರ, ಅತ್ತಿಬೆಲೆ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು ವಾಹನ ಸವಾರರು ಪರದಾಡುವಂತಾಯಿತು.
,