ಕಳಸದಲ್ಲಿ ಧಾರಾಕಾರ ಮಳೆ – ಟೀ ಎಸ್ಟೇಟ್‍ಗೆ ನುಗ್ಗಿದ ನೀರು, ಕಾರ್ಮಿಕರ ಪರದಾಟ

Public TV
1 Min Read

ಚಿಕ್ಕಮಗಳೂರು: ಕಳಸ (Kalasa) ತಾಲೂಕಿನ ಸುತ್ತಮುತ್ತ ಭಾರೀ (Rain) ಮಳೆಯಾಗುತ್ತಿದೆ. ಪರಿಣಾಮ ತಾಲೂಕಿನ ಕೆಳಗೊರು ಗ್ರಾಮದಲ್ಲಿ ಟೀ ಎಸ್ಟೇಟ್‍ಗೆ ನೀರು ನುಗ್ಗಿದೆ.

ಎಸ್ಟೇಟ್‍ಗೆ ನೀರು ನುಗ್ಗಿದ ವೇಳೆ, ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹಠಾತ್ ಆಗಿ ನೀರು ನುಗ್ಗಿದ್ದರಿಂದ ಕಾರ್ಮಿಕರು ಕಂಗಾಲಾಗಿದ್ದಾರೆ. ಕಟಾವು ಮಾಡಿದ್ದ ಟೀ ಎಲೆಗಳನ್ನು ಕಾಪಾಡಿಕೊಳ್ಳಲು ಪರದಾಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಮೇಘಸ್ಫೋಟ – 6 ಜನ ಸಾವು, 11 ಮಂದಿ ನಾಪತ್ತೆ

ನಿರಂತರ ಮಳೆಯಿಂದ ಮಲೆನಾಡಿಗರ ಜನಜೀವನ ಹೈರಾಣಾಗಿದೆ. ನಿರಂತರ ಸುರಿಯುತ್ತಿರೋ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ತೋಟದಲ್ಲಿ ಅರ್ಧಕರ್ಧ ಬೆಳೆ ನಾಶವಾಗಿದೆ. ಇಂದು ಸಹ ಮಳೆ ನಿರಂತರವಾಗಿ ಸುರಿಯುತ್ತಿದೆ. ಇದನ್ನೂ ಓದಿ: ಎನ್.ಆರ್‌ಪುರ | ಸ್ಮಶಾನವಿಲ್ಲದೇ ಭದ್ರಾ ನದಿಯ ನಡುಗಡ್ಡೆಯಲ್ಲಿ ಶವಸಂಸ್ಕಾರ – 20 ವರ್ಷಗಳಿಂದ ಸಮಸ್ಯೆಗೆ ಸಿಗದ ಮುಕ್ತಿ 

Share This Article