ಶಾಲಾ ಆವರಣವಾಯ್ತು ಕೆರೆ – ಭಾರೀ ಮಳೆಗೆ 3 ಅಂತಸ್ತಿನ ಕಟ್ಟಡ ನೆಲಸಮ

Public TV
1 Min Read

ಹುಬ್ಬಳ್ಳಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆ ನಗರದ ಹಲವೆಡೆ ಅವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ಶಾಲಾ ಅವರಣದಲ್ಲಿ ನೀರು ತುಂಬಿ ಕೆರೆಯಂತಾಗಿ ಮಕ್ಕಳು ಪರದಾಡುವಂತಾಗಿದೆ.

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣಕ್ಕೆ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ. ನೀರು ನಿಂತ ಪರಿಣಾಮ ಮಕ್ಕಳು ಆವರಣದಿಂದ ತರಗತಿಗಳಿಗೆ ಹೋಗಲು ಪರಡಾಡುತ್ತಿದ್ದಾರೆ. ಮಳೆಯ ನೀರಿನಲ್ಲಿಯೇ ಕೆಸರು ಮಯವಾಗಿ ಮಕ್ಕಳು ತರಗತಿಗೆ ಹೋಗುತ್ತಿದ್ದಾರೆ.

ಅಷ್ಟೇ ಅಲ್ಲದೆ ಸತತ ಎರಡು ದಿನಗಳ ಮಳೆ ಹಿನ್ನೆಲೆ ಮೂರು ಅಂತಸ್ತಿನ ಕಟ್ಟಡವೊಂದು ನೆಲಸಮವಾಗಿದೆ. ಹುಬ್ಬಳ್ಳಿಯ ಬಾರ್ದನ್‍ಗಲ್ಲಿಯಲ್ಲಿದ್ದ ಕಟ್ಟದ ಕುಸಿದಿದೆ. ನಗರದ ನಿವಾಸಿ ಸಂತೋಷ ಉಗರಗೋಳ ಅವರಿಗೆ ಸೇರಿದ ವಾಣಿಜ್ಯ ಕಟ್ಟಡ ಸತತ ಮಳೆಗೆ ನೆಲಕ್ಕೆ ಉರುಳಿದೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *