ಧಾರವಾಡ | ಜೋಶಿ ಭಾಷಣದ ವೇಳೆಯೇ ಅಬ್ಬರಿಸಿದ ಮಳೆರಾಯ – ಕುಸ್ತಿ ಪಂದ್ಯ ರದ್ದು

1 Min Read

ಧಾರವಾಡ: ನಗರದ (Dharwad) ಕೆಸಿಡಿ ಮೈದಾನದಲ್ಲಿ ಸಂಸದ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿ ನಡೆಯುತ್ತಿರುವಾಗಲೇ ಭಾರೀ ಪ್ರಮಾಣದ (Rain) ಮಳೆಯಾಗಿದೆ. ಇದರಿಂದ ಕುಸ್ತಿ ಪಂದ್ಯಾವಳಿಗಳು ರದ್ದಾಗಿವೆ.

ಕ್ರೀಡಾ ಸಂಕೀರ್ಣ ಹಾಗೂ ಈಜುಕೊಳ ಉದ್ಘಾಟಿಸಿದ ನಂತರ ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹಾಗೂ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಶಾಸಕರು ಕೆಸಿಡಿ ಮೈದಾನಕ್ಕೆ ತೆರಳಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.‌ ಇದನ್ನೂ ಓದಿ: ಚಿಕ್ಕಮಗಳೂರು | ಮುತ್ತೋಡಿ ಅರಣ್ಯಕ್ಕೆ ಬೆಂಕಿ ಇಟ್ಟವರ ಶೋಧಕ್ಕಿಳಿದ ಶ್ವಾನದಳ

ಪ್ರಹ್ಲಾದ್ ಜೋಶಿ ಅವರು ಮಾತನಾಡುತ್ತಿರುವಾಗಲೇ ಮಳೆ ಆರಂಭವಾಯಿತು. ಅವರು ಮಾತನಾಡುತ್ತಿದ್ದಾಗ ಸಣ್ಣದಾಗಿ ಮಳೆ ಆರಂಭವಾಗಿದ್ದರಿಂದ ಪ್ರೇಕ್ಷಕರು ಎದ್ದು ಹೊರಟು ನಿಂತರು. ಆಗ ಜೋಶಿ, ಇದು ಸಣ್ಣ ಮಳೆ ಇದೆ ಕುಳಿತುಕೊಳ್ಳಿ ಎಂದು ವಿನಂತಿಸಿದರು. ಆದರೆ, ಅಷ್ಟರಲ್ಲಾಗಲೇ ವಿಪರೀತ ಮಳೆ ಆರಂಭವಾಗಿದ್ದರಿಂದ ಪ್ರೇಕ್ಷಕರಾದಿಯಾಗಿ ಎಲ್ಲರೂ ಕ್ರೀಡಾಂಗಣ ಬಿಟ್ಟು ಹೊರ ನಡೆದರು.‌

ಈ ಫೈನಲ್ ಕುಸ್ತಿ ಪಂದ್ಯಾವಳಿಗೆ ದೇಶ ಹಾಗೂ ಹೊರ ದೇಶಗಳಿಂದಲೂ ಕುಸ್ತಿಪಟುಗಳು ಬಂದಿದ್ದರು. ಆದರೆ, ಮಳೆ ಆಗಿದ್ದರಿಂದ ಶನಿವಾರ ನಡೆಯಬೇಕಿದ್ದ ಕುಸ್ತಿ ಪಂದ್ಯಾವಳಿಗಳು ರದ್ದಾದವು. ಕೇಂದ್ರ ಕ್ರೀಡಾ ಸಚಿವರೂ 7 ಗಂಟೆ ವಿಮಾನಕ್ಕೆ ಹೊರಡಬೇಕಿದ್ದರಿಂದ ಅವರೂ ಸಹ ಹುಬ್ಬಳ್ಳಿ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ಯುದ್ಧದ ಎಫೆಕ್ಟ್; ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 8-10 ರೂ. ಏರಿಕೆ

ಸಂಜೆಯಾಗುತ್ತಿದ್ದಂತೆ ಮಳೆಯ ಅಬ್ಬರ ನಗರದಲ್ಲಿ ಹೆಚ್ಚಾಗಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ.

Share This Article