ಚಿಕ್ಕಬಳ್ಳಾಪುರದಲ್ಲಿ ಭಾರೀ ಮಳೆ – ಜನಜೀವನ ಅಸ್ತವ್ಯಸ್ತ

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

chikkaballapura rain

ನಗರದ ಎಂಜಿ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ತುಂಬಿದ್ದು ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ ಮತ್ತು ಪ್ರತಿಷ್ಠಿತ ಡಿವೈನ್ ಸಿಟಿ ಲೇಔಟ್‍ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನ ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ. ಅಲ್ಲದೇ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಗಿತ್ತು.

chikkaballapura rain

ಚಿಕ್ಕಬಳ್ಳಾಪುರದಿಂದ ಮಂಚನಬಲೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‍ನಲ್ಲಿ ಮೂರಡಿಗೂ ಹೆಚ್ಚು ನೀರು ನಿಂತಿದ್ದು, ಈ ಅವಾಂತರ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸದಸ್ಯತ್ವ ಬೇಕಾದ್ರೆ ಷರತ್ತು ಅನ್ವಯ

chikkaballapura rain

ಮಳೆರಾಯನ ಆರ್ಭಟಕ್ಕೆ ಮಂಚೇನಹಳ್ಳಿ-ತೊಂಡೆಬಾವಿ ಸೇತುವೆ ಬಳಿ ಇರುವ ಪಿನಾಕಿನ ನದಿ ದಶಕಗಳ ನಂತರ ಮೈದುಂಬಿ ಉಕ್ಕಿ ಹರಿಯುತ್ತಿದೆ. ಇನ್ನೂ ಮುಷ್ಟೂರು ಕೆರೆ ಕೋಡಿ ಹರಿದ ಹಿನ್ನೆಲೆ ಮುಷ್ಟೂರು ಗ್ರಾಮ ಜಲಾವೃತಗೊಂಡಿದೆ. ಜೊತೆಗೆ ಅಮಾನಿ ಭೈರಸಾಗರ ಕೆರೆ ಕೂಡ ಉಕ್ಕಿ ಹರಿಯುತ್ತಿದ್ದು, ಇದೇ ಸಮಯದಲ್ಲಿ ತುರ್ತು ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರದೊಯ್ಯುತ್ತಿದ್ದ ಅಂಬ್ಯುಲೆನ್ಸ್ ಅರ್ಧದಲ್ಲಿಯೇ ಆಫ್ ಆಗಿದೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ವಾಹನವನ್ನು ತಳ್ಳಿ ಚಾಲಕನಿಗೆ ಸಹಾಯ ಮಾಡಿದ್ದಾರೆ. ದನ್ನೂ ಓದಿ: ಮೊಬೈಲ್ ಸ್ಟುಡಿಯೋ ಉದ್ಘಾಟಸಿದ ದುನಿಯಾ ವಿಜಯ್

Share This Article
Leave a Comment

Leave a Reply

Your email address will not be published. Required fields are marked *