ಬೆಂಗಳೂರು: ಗುರುವಾರ ರಾತ್ರಿ ಬೆಂಗಳೂರಿನ ಹಲವೆಡೆ ಮಳೆ ಸುರಿದಿದ್ದು, ಬಿಸಿಲ ಬೇಗೆಗೆ ಮಳೆರಾಯ ತಂಪೆರೆದಿದ್ದಾನೆ.
ಟೌನ್ ಹಾಲ್, ಮೆಜೆಸ್ಟಿಕ್, ಮಾರ್ಕೆಟ್, ಚಾಮರಾಜಪೇಟೆ, ಬಸವನಗುಡಿ, ವಿಧಾನಸೌಧ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಬುಧವಾರವೂ ಸಂಜೆ ವೇಳೆ ಮಳೆರಾಯನ ಅಬ್ಬರ ಜೋರಾಗಿತ್ತು. ಇದನ್ನೂ ಓದಿ: ಒಟ್ಟು 45 ಪಾಸಿಟಿವ್ – ಬೆಂಗಳೂರು ಹೊರತುಪಡಿಸಿ 3 ಜಿಲ್ಲೆಗಳಲ್ಲಿ ಒಂದೊಂದು ಕೇಸ್
ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳೆಲ್ಲಾ ಕೆರೆಯಂತಾಗಿದೆ. ಮಳೆಯ ಅಬ್ಬರಕ್ಕೆ ಎಂಜಿ ರಸ್ತೆ ಹಾಗೂ ಅನೀಲ್ ಕುಂಬ್ಳೆ ರಸ್ತೆಗಳಲ್ಲಿ ಮೊಣಕಾಲುದ್ದಕ್ಕೂ ನೀರು ನಿಂತಿದೆ. ದಿಢೀರನೆ ಸುರಿದ ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ. ಇದನ್ನೂ ಓದಿ: ಕಲಾವಿದನ ನಾಲಿಗೆಯಿಂದ ಅರಳಿತು ಅಂಬೇಡ್ಕರ್ ಚಿತ್ರ
ಮಳೆಯ ಭರಕ್ಕೆ ಚಾಮರಾಜಪೇಟೆಯಲ್ಲಿ ಮರವೊಂದು ಧರೆಗುಳಿದ ಘಟನೆಯೂ ನಡೆದಿದೆ.