– ಬಿಬಿಎಂಪಿ ವಲಯ ಕಚೇರಿ ರಸ್ತೆಯಲ್ಲೇ ತುಂಬಿ ಹರಿದ ಮಳೆ ನೀರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿಂದು (Bengaluru Rains) ಸಂಜೆ ಏಕಾಏಕಿ ಮಳೆ ಅಬ್ಬರಿಸಿದೆ. ಬೆಳಗ್ಗೆಯಿಂದ ಕಾಣಿಸಿಕೊಳ್ಳದ ಮಳೆರಾಯ ಸಂಜೆ ಏಕಾಏಕಿ ಅಪ್ಪಳಿಸಿದೆ. ಕೆಲವೇ ನಿಮಿಷ ಸುರಿದ ಮಳೆಗೆ ಹಲವೆಡೆ ಅವಾಂತರ ಉಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಪರದಾಟುವಂತಾಗಿದೆ.
ಕಳೆದ 2-3 ದಿನಗಳಿಂದ ಆಗೊಮ್ಮೆ ಈಗೊಮ್ಮೆ ಮಳೆ ಬಂದು ಹೋಗುತ್ತಿತ್ತು. ಆದ್ರೆ ಸೆಪ್ಟೆಂಬರ್ ಮೊದಲ ದಿನವೇ ಜೋರು ಮಳೆ ಸುರಿದಿದೆ. ಮಳೆಗಾಲದ ದಿನಗಳಿಗೆ ಹೋಲಿಸಿದ್ರೆ ಸೋಮವಾರ ಸಂಜೆ ಸುರಿದ ಮಳೆ ಬಿರುಸಾಗಿತ್ತು. ರಸ್ತೆಯಲ್ಲಿ ಜನ, ವಾಹನ ಸಂಚಾರ ಸಾಧ್ಯವಾಗದಷ್ಟು ಜೋರಿತ್ತು. ಮಿಂಚು ಗುಡುಗು ಕೂಡ ಇದ್ದು ಜನ ಭಯ ಭೀತರಾದರು. ವಾಹನ ಸವಾರರು ಮಳೆಯಲ್ಲಿ ಸಂಚಾರ ಮಾಡುವ ಧೈರ್ಯ ಮಾಡದೇ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮರ, ಕಟ್ಟಡಗಳ ಬಳಿ ಆಶ್ರಯ ಪಡೆದಿದ್ದರು. ಇನ್ನೂ ಅಲ್ಲಲ್ಲಿ ಟ್ರಾಫಿಕ್ ದಟ್ಟಣೆ ಕೂಡ ಉಂಟಾಗಿತ್ತು. ಇದನ್ನೂ ಓದಿ: Ramanagara | ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ – 23 ಮಂದಿಯ ವಿರುದ್ಧ ಎಫ್‌ಐಆರ್
ಎಲ್ಲೆಲ್ಲಿ ಮಳೆಯ ಆರ್ಭಟ ಜೋರು?
ಟೌನ್ ಹಾಲ್, ಕಾರ್ಪೋರೇಷನ್, ಜಯನಗರ, ಜೆಪಿ ನಗರ ಸುತ್ತಮುತ್ತ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತ, ಮಲ್ಲೇಶ್ವರಂ ರಸ್ತೆ, ಮಂತ್ರಿ ಮಾಲ್ ಯಲ್ಲಿ ಜೋರು ಮಳೆ ಉಂಟಾಗಿತ್ತು. ಅಲ್ಲದೇ ಬಿಬಿಎಂಪಿ ವಲಯ ಕಚೇರಿ ಮುಂದಿನ ರಸ್ತೆಯೇ ತುಂಬಿ ಹರಿಯುತ್ತಿದ್ದ ದೃಶ್ಯವೂ ಕಂಡುಬಂದಿತು. ಅಲ್ಲದೇ ಕೆ.ಆರ್ ಮಾರ್ಕೆಟ್, ಶಾಂತಿನಗರದಲ್ಲೂ ಜೋರು ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದ್ದವು. ಇದನ್ನೂ ಓದಿ: ಡಿಕೆಶಿ ನಟ್ಟು ಬೋಲ್ಟು ಹೇಳಿಕೆ ಸಾಧು ಕೋಕಿಲ ಕಿತಾಪತಿ – ಕಿಚ್ಚ ಸುದೀಪ್
ಇನ್ನೂ ಏಕಾಏಕಿ ಸುರಿದ ಮಳೆಯಿಂದಾಗಿ ಕೆಲ ಸಮಯದ ರಸ್ತೆಯಲ್ಲಿ 2 ರಿಂದ 3 ಅಡಿಯಷ್ಟು ನೀರು ಆವೃತವಾಗಿತ್ತು. ಅಲ್ಲಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಇದು ವಾಹನ ಸವಾರರನ್ನೂ ಹೈರಾಣಾಗುವಂತೆ ಮಾಡಿತ್ತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿತ್ತು. ಇದನ್ನೂ ಓದಿ: ಭಾರೀ ಭ್ರಷ್ಟಾಚಾರ ಆರೋಪ – ಆನೇಕಲ್ ತಹಶೀಲ್ದಾರ್ ಕಚೇರಿಗೆ ರೈತರಿಂದ ಮುತ್ತಿಗೆ