ಮಹಾಮಳೆಗೆ ಮತ್ತೆ ತತ್ತರಿಸಿದ ಬೆಂಗಳೂರು

Public TV
1 Min Read

ಬೆಂಗಳೂರು: ಗೌರಿ ಗಣೇಶ ಹಬ್ಬದ ಹೊತ್ತಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿ ಮತ್ತೆ ವರುಣ ಆರ್ಭಟಿಸಿದ್ದಾನೆ.

ರಾತ್ರಿಯಿಡಿ ಸುರಿದ ಮಳೆಗೆ ಬೆಂಗಳೂರು ತತ್ತರಿಸಿದೆ. ಕೆ.ಆರ್.ಪುರಂ, ಮಾರತ್ ಹಳ್ಳಿ, ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಚಂದ್ರಾಲೇಔಟ್, ಶಾಂತಿ ನಗರ, ಯಶವಂತಪುರ, ಜಾಲಹಳ್ಳಿ, ವಿಜಯನಗರ, ಕಾರ್ಪೊರೇಷನ್, ಯಲಹಂಕ, ಹೆಬ್ಬಾಳ ಸೇರಿದಂತೆ ನಗರದ ಬಹುತೇಕ ಕಡೆ ಜೋರು ಮಳೆಯಾಗಿದೆ.

ಬುಧವಾರ ರಾತ್ರಿ ಒಟ್ಟು 82 ಮಿ.ಮೀ ನಷ್ಟು ಮಳೆ ನಗರದಲ್ಲಿ ದಾಖಲಾಗಿದೆ. ಇದ್ರಿಂದಾಗಿ ನಗರದ ಬಹುತೇಕ ಕಡೆ ಟ್ರಾಫಿಕ್ ಸಮಸ್ಯೆ ಸಹ ಉಂಟಾಗಿತ್ತು. ಬಹುತೇಕ ತಗ್ಗು ಪ್ರದೇಶಗಳು ಜಲಾವೃತವಾಗಿ ಸ್ಥಳೀಯರು ನಾನಾ ಅವಸ್ಥೆ ಪಡಬೇಕಾಯ್ತು. ಚಂದ್ರಲೇಔಟ್ ರಾಜಾಕಾಲುವೆ ಪಕ್ಕದ ಹತ್ತಾರು ಮನೆಗಳಿಗೆ ಮಳೆ ನೀರು ನಿಗ್ಗಿದ್ರಿಂದ ಜನ ನೀರನ್ನ ಹೊರಗೆ ಹಾಕೋದ್ರಲ್ಲೇ ರಾತ್ರಿ ಕಳೆದ್ರು.

ಎಚ್‍ಎಸ್‍ಆರ್ ಲೇಔಟ್ ಹಾಗೂ ಶಾಂತಿ ನಗರದಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿತ್ತು. ಮಾರತ್ ಹಳ್ಳಿ ಸುತ್ತಮುತ್ತ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೆ ಫಜೀತಿ, ಯಾವ ಜನಪ್ರತಿನಿಧಿಯಾಗ್ಲೀ, ಅಧಿಕಾರಿಗಳಾಗಲೀ ನಮ್ಮ ಕಷ್ಟ ಕೇಳೋಕೆ ಬರಲ್ಲ. ಮಕ್ಕಳ ಜೊತೆ ಈ ಕೊಳಚೆ ನೀರಿನಲ್ಲೇ ಬದುಕುವಂತಾಗಿದೆ ಎಂದು ಇಲ್ಲಿನ ಜನ ಅಳಲು ತೋಡಿಕೊಂಡ್ರು.

ಇನ್ನೊಂದೆಡೆ ಕೆಆರ್ ಮಾರ್ಕೆಟ್‍ ನಲ್ಲಿ ಹಬ್ಬದ ವ್ಯಾಪಾರ ಜೋರಾಗಿದೆ. ಬೆಳ್ಳಂಬೆಳಗ್ಗೆ ಹೂವು ಹಣ್ಣು ಖರೀದಿಸಲು ಸಾವಿರು ಜನ ಕೆಆರ್ ಮಾರ್ಕೆಟ್‍ಗೆ ಲಗ್ಗೆ ಇಟ್ಟಿದ್ದಾರೆ. ಕೆಸರಿನಲ್ಲೇ ವ್ಯಾಪಾರ ನಡೀತಿದೆ. ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ. ಆದ್ರೆ ಮಳೆ ಕಾರಣ ವ್ಯಾಪಾರ ಡಲ್ ಅಂತಿದ್ದಾರೆ ವ್ಯಾಪಾರಿಗಳು.

https://twitter.com/krpuramtraffic1/status/900434970421862400

Share This Article
Leave a Comment

Leave a Reply

Your email address will not be published. Required fields are marked *