ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಭಾನುವಾರ ಸಂಜೆ ಸುರಿದ ಮಳೆ ನಗರದಲ್ಲಿ ಸಾಕಷ್ಟು ಅವಾಂತರಕ್ಕೆ ಕಾರಣವಾಗಿತ್ತು. ಇದರ ಜೊತೆಗೆ ವಾಹನ ಸವಾರರಿಗೆ ಸಮಸ್ಯೆಯುಂಟು ಮಾಡಿತ್ತು.
ಇದೇ ರೀತಿ ರಾತ್ರಿ ಕೂಡ ನಗರದ ಹಲವೆಡೆ ರಾತ್ರಿಯಿಡೀ ತುಂತುರು ಮಳೆಯಾಗಿದೆ. ಪರಿಣಾಮ ಎಚ್ ಎಸ್ ಆರ್ ಲೇಔಟ್ ನ ಎಂಪೈರ್ ಮುಂಭಾಗದ ರಸ್ತೆಯಲ್ಲಿ ನೀರು ನಿಂತಿತ್ತು. ಈ ಹಿನ್ನಲೆ ಜೇಸಿಬಿ ಮೂಲಕ ರಸ್ತೆಯಲ್ಲಿ ಮುಚ್ಚಲಾಗಿದ್ದ ಕಲ್ಲು ತೆಗೆದು ಕಾಲುವೆಗೆ ನೀರು ಹೋಗುವಂತೆ ಮಾಡಲಾಯ್ತು. ಇನ್ನು ಇದೇ ರೀತಿ ಮಳೆಯಿಂದ ಕೊರಮಂಗಲದ ಕೆಲ ಏರಿಯಾಗಳಲ್ಲಿ ನೀರು ನಿಂತ ದೃಶ್ಯಗಳು ಕಂಡು ಬಂದವು. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮಳೆ ಅಬ್ಬರ- ಸವಾರರ ಪರದಾಟ, ಧರೆಗುರುಳಿದ ಮರಗಳು
ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೆಲ ರಸ್ತೆಗಳಲ್ಲಿ ಮತ್ತೆ ಗುಂಡಿಗಳು ಉದ್ಭವವಾಗಿದ್ದು. ಬೈಕ್ ಸವಾರರಿಗೆ ಕಂಟಕವಾಗೊ ಭೀತಿ ಶುರುವಾಗಿದೆ. ಶಾಂತಿನಗರದ ರಸ್ತೆಯ ತುಂಬೆಲ್ಲ ನೀರು ನಿಂತಿದ್ದು ವಾಹನ ಸವಾರರು ಪರದಾಡಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv