– ರಾಜಭವನದಲ್ಲಿ ಬಿದ್ದ ಮರ
ಬೆಂಗಳೂರು: ಬಿಸಿಲಿನಿಂದ ಕೂಡಿದ್ದ ಬೆಂಗಳೂರಿಗೆ ಕಳೆದೆರಡು ದಿನಗಳಿಂದ ಮಳೆರಾಯ ತಂಪೆರದಿದ್ದಾನೆ. ರಾತ್ರೀಯಿಡೀ ಸುರಿದ ಮಳೆಗೆ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ.
ಯಶವಂತಪುರ, ಮಲ್ಲೇಶ್ವರ ಸೇರಿದಂತೆ ಹಲವು ಏರಿಯಾಗಳಲ್ಲಿ ಮಳೆಯಾಗಿದೆ. ಅದರಲ್ಲೂ ವಸಂತನಗರದ ಮಹವೀರ್ ಜೈನ್ ಆಸ್ಪತ್ರೆಯ ರಸ್ತೆಯಲ್ಲಿ ಬೃಹದಾಕಾರದ ಮರ ಧರೆಗುರುಳಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಕೋಲಾರದಲ್ಲಂತೂ ಭಾರೀ ವರ್ಷಧಾರೆಯಾಗಿದೆ.
ನಿನ್ನೆ ರಾತ್ರಿ ಮಲ್ಲೇಶ್ವರಂ ಭಾಗದಲ್ಲಿ ಮಳೆ ಹೆಚ್ಚಾಗಿದೆ. ಹಾಗೂ ದಿಢೀರ್ ಮಳೆಗೆ ವಾಹನ ಸವಾರರು ಪರದಾಡಿದ್ದಾರೆ. ಮಳೆಯಿಂದ ರಕ್ಷಿಸಿಕೊಳ್ಳಲು ವಾಹನ ಸವಾರರು ಬಸ್ ನಿಲ್ದಾಣ, ಫ್ಲೈ ಓವರ್, ಅಂಡರ್ ಪಾಸ್ ಗಳಲ್ಲಿ ನಿಂತಿದ್ದರು. ಇದನ್ನೂ ಓದಿ: ಆನೇಕಲ್ ಬಳಿ ಹಳಿಯಲ್ಲಿ ಸಿಲುಕಿಕೊಂಡ ಕ್ಯಾಂಟರ್ – ಎಕ್ಸ್‌ಪ್ರೆಸ್ ರೈಲು ಡಿಕ್ಕಿಗೆ ಲಾರಿ ಎಂಜಿನ್ ಪೀಸ್ ಪೀಸ್
ಬೆಂಗಳೂರಿನ ಮಳೆಗೆ ಮರವೊಂದು ಧರೆಗುರುಳಿದಿದ್ದು, ವಸಂತನಗರದ ಮಹಾವೀರ್ ಜೈನ್ ಆಸ್ಪತ್ರೆಯ ರಸ್ತೆಯಲ್ಲಿ ದೊಡ್ಡದಾದ ಮರ ಉರುಳಿಬಿದ್ದಿದೆ. ರಾಜಭವನ ರಸ್ತೆಯಲ್ಲಿ ಮರದ ಕೊಂಬೆ ಮುರಿದು ಬಿದ್ದಿದೆ. ರಾಜಭವನದ ಕಾಂಪೌಂಡ್ ನ ಕಬ್ಬಿಣದ ತಡೆಗೋಡೆ ಸಹಿತ ಕೊಂಬೆ ಮರಿದಿದೆ. ಕೂಡಲೇ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತೆರವು ಕಾರ್ಯಚರಣೆ ನಡೆಸಿದ್ದಾರೆ.
ಅದೃಷ್ಟವಶಾತ್ ವಾಹನ ಸಂಚಾರ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ. ಕೊಂಬೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ರಾಜಭವನ ರಸ್ತೆಯಲ್ಲಿ ಕೆಲಹೊತ್ತು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಪ್ರಯಾಗರಾಜ್ ಸಂತ ನರೇಂದ್ರಗಿರಿ ಪತ್ತೆ