ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

Public TV
1 Min Read

ಕಲಬುರಗಿ: ಬೇಸಿಗೆ ಕಾಲ ಬಂದರೆ ಸಾಕು ತಂಪು ಪಾನೀಯಗಳಿಗೆ ಜನ ಮೊರೆ ಹೋಗುತ್ತಾರೆ. ಆದರೆ ಬಿಸಿಲ ನಾಡು ಕಲಬುರಗಿಯ ಮದ್ಯಪ್ರಿಯರು ಬಿಸಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋಗಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ಹೇಳುತ್ತಿವೆ.

ಬೇಸಿಗೆ ಕಾಲ ಆರಂಭವಾದ ನಂತರ ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್‍ನಿಂದ ಇಂದಿನವರೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಬಚಾವಾಗಲು ಕಲಬುರಗಿಯಲ್ಲಿನ ಮದ್ಯಪ್ರಿಯರು ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ನೇರವಾಗಿ ಬಾರ್‍ಗಳತ್ತ ಮುಖ ಮಾಡಿ ಚಿಲ್ಡ್ ಬೀಯರ್ ಒಂದರ ಮೇಲೊಂದು ಬಾಟಲಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಬಾರ್‍ಗಳು ಮಧ್ಯಾಹ್ನವಾದ್ರೆ ಗಿರಾಕಿಗಳಿಂದ ಫುಲ್ ಆಗ್ತಾ ಇವೆ. ಈ ಬಗ್ಗೆ ಖುದ್ದು ಗ್ರಾಹಕರನ್ನು ಕೇಳಿದ್ರೆ ಬಿಸಲಿನ ತಾಪ ಹೆಚ್ಚಳದಿಂದ ಹಾರ್ಡ್ ಡ್ರಿಂಕ್ಸ್ ಬದಲು ಬೀಯರ್ ಮೊರೆ ಹೋಗಿದ್ದೇವೆ ಎಂದು ಹೇಳುತ್ತಾರೆ.

ಅಬಕಾರಿ ಇಲಾಖೆಯ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಏಪ್ರಿಲ್ ನಲ್ಲಿ 10 ಸಾವಿರದ 396 ಬೀಯರ್ ಬಾಕ್ಸ್ ಗಳು ಹೆಚ್ಚಿಗೆ ಮಾರಾಟವಾಗಿದ್ದು, ಇದನ್ನು ಅರಿತ ಮದ್ಯದಂಗಡಿಯವರು ಇದೀಗ ಬಿಯರ್ ಸ್ಟಾಕ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಬಕಾರಿ ಇಲಾಖೆಗೆ ಕೋಟಿ ಕೋಟಿ ಹಣ ಕೇವಲ ಬೀಯರ್ ಮಾರಾಟದಿಂದ ಆದಾಯ ಬರುತ್ತಿದೆ. ಬೇಸಿಗೆ ಕಾಲದ ಈ ಮೂರು ತಿಂಗಳಲ್ಲಿ ಹಗಲು ಹೊತ್ತಿನಲ್ಲಿಯೇ ಬೀಯರ್ ಸೇವನೆ ಗ್ರಾಹಕರು, ಸಂಜೆಯಾದ್ರೆ ಮಾಮೂಲು ನಿತ್ಯದ ಗ್ರಾಹಕರು ಎಂದು ಬಾರ್‍ವೊಂದರ ವ್ಯವಸ್ಥಾಪಕರು ಹೇಳುತ್ತಾರೆ.

 

Share This Article
Leave a Comment

Leave a Reply

Your email address will not be published. Required fields are marked *