ಮಲಾವಿ ಉಪಾಧ್ಯಕ್ಷ ಸಹಿತ 9 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ನಾಪತ್ತೆ

Public TV
1 Min Read

ಲಿಲೋಂಗ್ವೆ: ಮಲಾವಿ ದೇಶದ ಉಪಾಧ್ಯಕ್ಷ ಸಹಿತ 9 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವು ಸೋಮವಾರ ನಾಪತ್ತೆಯಾಗಿದೆ.

ಸದ್ಯ ಉತ್ತರ ಮಲಾವಿಯ ನಗರದ ಸಮೀಪವಿರುವ ಪರ್ವತ ಕಾಡುಗಳಲ್ಲಿ ಸೈನಿಕರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಲಾವಿ ಅಧ್ಯಕ್ಷ ಲಾಜರಸ್ ಚಕ್ವೇರಾ ಹೇಳಿದ್ದಾರೆ.

51 ವರ್ಷದ ಉಪಾಧ್ಯಕ್ಷ ಸೌಲೋಸ್ ಚಿಲಿಮಾ (Saulos Chilima), ಮಾಜಿ ಪ್ರಥಮ ಮಹಿಳೆ ಶನಿಲ್ ಡಿಝಿಂಬಿರಿ (Shanil Dzimbiri) ಸಹಿತ 8 ಮಂದಿಯನ್ನು ಹೊತ್ತ ವಿಮಾನವು ದಕ್ಷಿಣ ಆಫ್ರಿಕಾದ ರಾಷ್ಟ್ರದ ರಾಜಧಾನಿ ಲಿಲೋಂಗ್ವೆಯಿಂದ ಬೆಳಗ್ಗೆ 9:17 ಕ್ಕೆ (ಸ್ಥಳೀಯ ಕಾಲಮಾನ) ಹೊರಟಿತು. ವಿಮಾನ ಟೇಕಾಫ್‌ ಆದ 45 ನಿಮಿಷಗಳ ನಂತರ Mzuzu ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ನಿರೀಕ್ಷೆಯಿತ್ತು. ಆದರೆ ರಾಡಾರ್‌ ಸಂಪರ್ಕ ಕಳೆದುಕೊಂಡ ಬಳಿಕ ವಿಮಾನದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ವಾಯುಯಾನ ಅಶಿಕಾರಿಗಳು ಕೈಗೊಂಡ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದು ಹೃದಯವಿದ್ರಾವಕ ಪರಿಸ್ಥಿತಿಯಾಗಿದ್ದು, ನಾವೆಲ್ಲರೂ ಭಯಭೀತರಾಗಿದ್ದೇವೆ ಮತ್ತು ಚಿಂತಿತರಾಗಿದ್ದೇವೆ. ಆದರೆ ನಾಪತ್ತೆಯಾದ ವಿಮಾನವನ್ನು ಪತ್ತೆ ಮಾಡಲು ಪ್ರಯತ್ನಿಸುತ್ತೇವೆ. ಮತ್ತು ವಿಮಾನದಲ್ಲಿ ಇದ್ದವರೆಲ್ಲ ಬದುಕುಳಿದಿದ್ದಾರೆ ಎಂಬ ಭರವಸೆ ಇದೆ ಎಂದು ಚಕ್ವೇರಾ ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿ ಜೊತೆ ಕಾಲ್‌ನಲ್ಲಿದ್ದಾಗಲೇ ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

Share This Article