ತನ್ನ ಮರಿ ಸತ್ತಿದ್ರೂ, ಮುತ್ತು ಕೊಡುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ

Public TV
1 Min Read

ಕೋಲಾರ: ಕೋತಿಯೊಂದು ಸತ್ತ ಮರಿಯನ್ನ ತನ್ನ ಬಳಿಯೇ ಇರಿಸಿಕೊಂಡು ರೋಧಿಸುತ್ತಿರುವ ಮನಕಲಕುವ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.

ಕೋಲಾರದ ಗಾಂಧಿ ನಗರದ ಅಶ್ವತ್ಥ ಕಟ್ಟೆ ಬಳಿ ತಾಯಿ ಕೋತಿಯೊಂದು ಮರದಿಂದ ಬಿದ್ದು ಸಾವನ್ನಪ್ಪಿರುವ ಮರಿ ಕೋತಿಯನ್ನ ಮುದ್ದಾಡುತ್ತಿದ್ದ ದೃಶ್ಯ ಎಂತಹವರ ಹೃದಯವೂ ಕಿತ್ತು ಬರುವಂತಿತ್ತು. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮರದಲ್ಲಿ ಸೆರೆಯಾಗಿವೆ.

ತಾಯಿ ಕೋತಿ ತನ್ನ ಮರಿ ಸತ್ತು ಹೋಗಿದ್ದರೂ ಮರದಲ್ಲಿ ಇರಿಸಿಕೊಂಡಿದ್ದು, ಅದನ್ನೇ ನೋಡುತ್ತಿದ್ದ ಮತ್ತೊಂದು ಕೋತಿಯ ಸನ್ನಿವೇಶ ಮನಕಲಕುವಂತಿತ್ತು. ಜೊತೆಗೆ ಮೃತಪಟ್ಟ ಮರಿ ಕೋತಿಗೆ ಮುತ್ತುಕೊಟ್ಟು ಪ್ರೀತಿ ಮಾಡುತ್ತಿದ್ದ ಸನ್ನಿವೇಶ ತಾಯಿ ಪ್ರೀತಿಗೆ ಸಾಕ್ಷಿಯಾಗಿತ್ತು.

ಈ ಎಲ್ಲಾ ದೃಶ್ಯಗಳನ್ನ ಕಂಡ ಜನರು, ಮನುಷ್ಯ ಸತ್ತರೆ ಒಂದೆ ದಿನಕ್ಕೆ ಶವ ಸಂಸ್ಕಾರ ನಡೆಸಿ ಮರೆಯುತ್ತೇವೆ. ಆದ್ರೆ ಪ್ರಾಣಿಗಳು ಸತ್ತರೂ ಕೂಡ ತಮ್ಮ ಪ್ರೀತಿಯನ್ನ ಹೇಗೆ ನೀಡುತ್ತವೆ ಎಂಬುದಕ್ಕೆ ಈ ದೃಶ್ಯಗಳೆ ಸಾಕ್ಷಿಯಾಗಿದ್ದವು. ಆದರೆ ಈ ಕೋತಿ ತನ್ನ ಮರಿ ಸತ್ತರು ಮರಿ ದೇಹ ಬಿಡದೆ ಎತ್ತಿಕೊಂಡು ತಿರುಗುತ್ತಿದ್ದನ್ನು ಕಂಡು ಅದೆಷ್ಟೋ ಜನ್ರು ಅಂತ್ಯ ಸಂಸ್ಕಾರ ಮಾಡಲು ಮುಂದಾದ್ರು. ಆದ್ರೆ ತಾಯಿ ಕೋತಿ ಮಾತ್ರ ಸ್ಥಳದಿಂದ ತನ್ನ ಮರಿಯನ್ನ ಹೊತ್ತೊಯ್ಯುತಿತ್ತು.

https://www.youtube.com/watch?v=7iB6BAFG_Og&feature=youtu.be

Share This Article
Leave a Comment

Leave a Reply

Your email address will not be published. Required fields are marked *