ಹಾಸನದಲ್ಲಿ ಮಾತ್ರ ಹಾರ್ಟ್ ಅಟ್ಯಾಕ್ ಕೇಸ್ ಜಾಸ್ತಿ ಆಗಿಲ್ಲ, ಇಡೀ ದೇಶದಲ್ಲಿ ಆಗ್ತಿದೆ: ಎ.ಮಂಜು

Public TV
2 Min Read

ಬೆಂಗಳೂರು: ಹಾಸನದಲ್ಲಿ (Hassan) ಮಾತ್ರವಲ್ಲ ಇಡೀ ದೇಶದಲ್ಲಿ ಹೃದಯಾಘಾತದಿಂದ (Heart Attack) ಸಾವು ಪ್ರಕರಣ ಆಗುತ್ತಿದೆ. ಕೇವಲ ಹಾಸನದಲ್ಲಿ ಮಾತ್ರ ಆಗುತ್ತಿದೆ ಎಂದು ಬಿಂಬಿಸಬೇಡಿ ಎಂದು ಮಾಜಿ ಸಚಿವ, ಶಾಸಕ ಎ.ಮಂಜು (A Manju) ಮನವಿ ಮಾಡಿದ್ದಾರೆ.

ಹಾಸನದಲ್ಲಿ ಹೆಚ್ಚು ಹಾರ್ಟ್ ಅಟ್ಯಾಕ್ ಕೇಸ್ ಆಗುತ್ತಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೃದಯಾಘಾತದಿಂದ ಸಾವು ಕೇವಲ ಹಾಸನದಲ್ಲಿ ಮಾತ್ರ ಅಲ್ಲ, ಇಡೀ ದೇಶದಲ್ಲಿ ಆಗುತ್ತಿದೆ. ನೀವು ಟಿವಿಯವರು ಕೇವಲ ಹಾಸನದಲ್ಲಿ ಮಾತ್ರ ಆಗುತ್ತಿದೆ ಅಂತ ತೋರಿಸುತ್ತಿದ್ದೀರಾ. ಬೇರೆ ಜಿಲ್ಲೆ ಯಾಕೆ ತೋರಿಸುತ್ತಿಲ್ಲ? ನಿಮ್ಮನ್ನ ಜನ ಬುಕ್ ಮಾಡಿಕೊಂಡು ಹಾಸನ ಜನರನ್ನು ತೋರಿಸಿಕೊಂಡು ಮಾರ್ಕೆಟ್ ಮಾಡ್ತಿದ್ದಾರೆ ಎಂಬುದು ನನಗೆ ಅನುಮಾನ ಇದೆ.ಇದನ್ನ ದಯವಿಟ್ಟು ಮಾಡಬೇಡಿ. ಹೃದಯಾಘಾತ ಬರೀ ಹಾಸನದಲ್ಲಿ ಯಾಕೆ ತೊರಿಸುತ್ತೀರಾ? ಬೆಂಗಳೂರು ಮೈಸೂರು ಯಾಕೆ ತೋರಿಸಲ್ಲ? ಬರೀ ಹಾಸನದ ಮೇಲೆ ಯಾಕೆ ಗೂಬೆ ಕೂರಿಸುತ್ತೀರಾ? 100% ಬೇರೆ ಕಡೆಯೂ ಆಗಿದೆ, ನಿಮಗೆ ನಂಬರ್ ಗೊತ್ತಿಲ್ಲ ಅಷ್ಟೇ ಎಂದರು. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ನಂತೆ ಕಲಬುರಗಿಯಲ್ಲೊಂದು ಕೊಲೆ – ಸೆಕ್ಸ್‌ಗಾಗಿ ಮೆಸೇಜ್ ಮಾಡಿದ್ದವನ ಹತ್ಯೆಗೈದಿದ್ದ ಲಿವ್ ಇನ್ ಪ್ರೇಮಿಗಳು ಅರೆಸ್ಟ್

ಹಾಸನದಲ್ಲಿ ಸಾವನ್ನಪ್ಪಿರೋರಲ್ಲಿ ಇಬ್ಬರೇ ಪೋಸ್ಟ್ ಮಾರ್ಟಮ್ ಮಾಡಿಕೊಂಡಿದ್ದಾರೆ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಯಾವ ಹೃದಯಾಘಾತವೂ ಆಗೋದಿಲ್ಲ. ಇನ್ನೊಂದು ಕಡೆ ಕೋವಿಡ್ ಇಂಜೆಕ್ಷನ್‌ನಿಂದ ಬಂದಿದೆ ಅಂತ ಮುಖ್ಯಮಂತ್ರಿಗಳು ಹೇಳುತ್ತಾರೆ. ಅಲ್ಲಾ ರೀ ಮೋದಿ ಇಂಜೆಕ್ಷನ್ ತಯಾರು ಮಾಡ್ತಾರಾ? ಲ್ಯಾಬ್‌ನಲ್ಲಿ ಇಂಜೆಕ್ಷನ್ ತಯಾರು ಮಾಡುತ್ತಾರೆ. ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಅಂತ ನಂಗೆ ರಿಪೋರ್ಟ್ ಬಂದಿದೆ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಎಲ್ಲರೂ ಚೆನ್ನಾಗಿ ಇರುತ್ತಾರೆ. ಜಯದೇವ ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿ ಯಾರೋ ಹೇಳಿದ್ದನ್ನ ತೋರಿಸಬೇಡಿ. ಎಲ್ಲಾ ಜಿಲ್ಲೆಗಳಲ್ಲೂ ಹೃದಯಾಘಾತವಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

ಮಾಂಸ ತಿನ್ನೋರು ಎಲ್ಲಿ ಜಾಸ್ತಿ ಇದ್ದಾರೆ ಅಲ್ಲಿ ಜಾಸ್ತಿಯಾಗಿದೆ ಎಂದು ಮಾಧ್ಯಮದವರು ತೋರಿಸುತ್ತಿದ್ದೀರಿ, ದಯವಿಟ್ಟು ಹಾಗೆ ತೋರಿಸಬೇಡಿ. ಲೈಫ್ ಸ್ಟೈಲ್ ಬದಲಾವಣೆ ಮಾಡಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಮನವಿ ಮಾಡಿದರು.  ಇದನ್ನೂ ಓದಿ: ಯಾದಗಿರಿ | ಕಲುಷಿತ ನೀರು ಸೇವನೆ ಶಂಕೆ – ಮೂವರು ಸಾವು, 20 ಮಂದಿ ಅಸ್ವಸ್ಥ

Share This Article