ಮನೆಯಲ್ಲೇ ತಯಾರಿಸಿ ರುಚಿಕರ ಓಟ್ಸ್‌ ಇಡ್ಲಿ

Public TV
1 Min Read

ಟ್ಸ್‌ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಒದಗಿಸುತ್ತದೆ. ಓಟ್ಸ್‌ನ್ನು ಹಾಗೇ ಬಟ್ಟಲ ಮುಂದೆ ಇಟ್ಟರೆ ಯಾರು ತಿನ್ನಲ್ಲ.. ಹಾಗಾಗಿ ಇದರಿಂದ ತಿಂಡಿ ಮಾಡಿದರೆ ಮಕ್ಕಳು ಹಾಗೂ ದೊಡ್ಡವರಿಗೆ ಇಷ್ಟವಾಗುತ್ತೆ. ಈಗ ಓಟ್ಸ್‌ನಲ್ಲಿ ಇಡ್ಲಿ ಮಾಡೋದು ಹೇಗೆ ಎಂದು ನೋಡೋಣ.

ಮಾಡಲು ಬೇಕಾಗುವ ಸಾಮಾಗ್ರಿಗಳು
2 ಕಪ್ ಓಟ್ಸ್
1 ಚಮಚ ಸಾಸಿವೆ
½ ಲೀಟರ್ ಮೊಸರು
½ ಟೀಸ್ಪೂನ್ ಚನಾ ದಾಲ್
1 ಟೀಸ್ಪೂನ್ ಉದ್ದಿನ ಬೇಳೆ
½ ಚಮಚ ಎಣ್ಣೆ
1 ಕಪ್ ತುರಿದ ಕ್ಯಾರೆಟ್
2 ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ
ರುಚಿಗೆ ತಕ್ಕಂತೆ ಉಪ್ಪು
½ ಚಮಚ ಅರಿಶಿನ ಪುಡಿ

ಓಟ್ಸ್ ಅನ್ನು ಹುರಿದು ಮಿಕ್ಸಿಯಲ್ಲಿ ಪುಡಿ ಮಾಡಿ. ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ ಮತ್ತು ದಾಲ್ ಸೇರಿಸಿ ಕೈ ಆಡಿಸುತ್ತಿರಿ. ದಾಲ್ ಕಂದು ಬಣ್ಣಕ್ಕೆ ತಿರುಗಿದ ನಂತರ ಕೊತ್ತಂಬರಿ ಮತ್ತು ಕ್ಯಾರೆಟ್ ಸೇರಿಸಿ. ಅದಕ್ಕೆ ಅರಿಶಿನ ಸೇರಿಸಿ ಮತ್ತು ಒಂದು ನಿಮಿಷ ಫ್ರೈ ಮಾಡಿ. ಒಂದು ಬಟ್ಟಲಿನಲ್ಲಿ, ಓಟ್ಸ್ ಮತ್ತು ತಯಾರಿಸಿದ ಮಸಾಲೆ ಮತ್ತು ಮೊಸರನ್ನು ಮಿಶ್ರಣ ಮಾಡಿ, ಚನ್ನಾಗಿ ಕಲಸಿ. ಇಡ್ಲಿ ಸ್ಟೀಮರ್‌ನಲ್ಲಿ ನೀವು ಮಾಡುವ ರೀತಿಯಲ್ಲಿ ಇಡ್ಲಿಯನ್ನು ತಯಾರಿಸಿ. ಬೆಂದ ಬಳಿಕ ಇಡ್ಲಿಗಳು ಸವಿಯಲು ಸಿದ್ಧ!

Share This Article