ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

Public TV
1 Min Read

ಳಿಗಾಲ ಬಂತೆಂದರೆ ಸಾಕು ರೋಗ ರುಜಿನಗಳು ಹೆಚ್ಚಾಗುತ್ತದೆ. ನಮ್ಮ ದೇಹಕ್ಕೆ ಕೊಬ್ಬನಾಂಶವಿರುವ ಆಹಾರದ ಅವಶ್ಯಕತೆ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸುವುದರಿಂದ ದೇಹವನ್ನು ಸಮೃದ್ಧವಾಗಿಸುವುದರ ಜೊತೆಗೆ ದೇಹಕ್ಕೆ ಜೀವಸತ್ವ ಹಾಗೂ ಇತರ ಪೋಷಕಾಂಶಗಳನ್ನು ಪಡೆಯಬಹುದು. ಇದರಿಂದಾಗಿ ಆರೋಗ್ಯಕರ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲದೇ ಆಯಾಸ, ಚರ್ಮ ಹಾಗೂ ಕೂದಲಿನ ಸಮಸ್ಯೆಗಳು ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಹಾರ್ಮೋನ್‌ಗಳ ಸಮತೋಲನ ಕಾಪಾಡಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವು ಸಹಾಯಕವಾಗಿದೆ. ಚಳಿಗಾಲದಲ್ಲಿ ನಾಲಿಗೆ ರುಚಿಗಾಗಿ ಬಿಸಿ ಬಿಸಿ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯಕ್ಕೆ ಅವಶ್ಯಕವಾಗಿರುವ ಪ್ರೋಟೀನ್ ಇರುವ ಪದಾರ್ಥಗಳನ್ನು ಸೇವಿಸುವುದು ಅಗತ್ಯವಾಗಿದೆ.

ಮೊಟ್ಟೆ: ಮೊಟ್ಟೆಗಳು ದೇಹದ ಅಂಗಾಂಶಗಳನ್ನು ಸದೃಢಗೊಳಿಸುವುದರ ಜೊತೆಗೆ ಪ್ರೋಟಿನ್‌ನ್ನು ಹೆಚ್ಚಿಸುತ್ತದೆ. ವಯಸ್ಕರು ದಿನಕ್ಕೆ ಎರಡು ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನಬಹುದು. ಮೊಟ್ಟೆಯಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳಿವೆ. ಆರೋಗ್ಯಕ್ಕೆ ಬೇಕಾಗುವ ಅಂಶಗಳನ್ನು ಒದಗಿಸುತ್ತದೆ.

ಮೀನು: ನಿಯಮಿತವಾಗಿ ಮೀನಿನ ಸೇವನೆಯಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮೀನು ಸೇವನೆ ಸಹಾಯ ಮಾಡುತ್ತದೆ.

ಡ್ರೈ ಫ್ರೂಟ್ಸ್: ಆರೋಗ್ಯಕರ ಜೀವನ ನಡೆಸಲು ಡ್ರೈ ಫ್ರೂಟ್ಸ್ ಗಳು ಅವಶ್ಯಕವಾಗಿದ್ದು, ಪ್ರೊಟೀನ್‌ಗಳು ಇದರಲ್ಲಿ ಹೆಚ್ಚಿರುತ್ತದೆ. ಡ್ರೈ ಫ್ರೂಟ್ಸ್ ಗಳನ್ನು ಪ್ರತಿದಿನ ಮುಂಜಾನೆ ತಿನ್ನುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹದಂತಹ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಿನವರು ನೀರಿನಲ್ಲಿ ನೆನೆಹಾಕಿ ಸೇವಿಸುತ್ತಾರೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

ಮೊಸರು: ಸಾಮಾನ್ಯವಾಗಿ ಹಾಲಿನ ಉತ್ಪನ್ನಗಳಿಂದ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ. ಅದರಲ್ಲೂ ಮೊಸರು ಜೀರ್ಣಕ್ರಿಯೆ ಸುಧಾರಿಸಲು ಸಹಾಯಕಾರಿಯಾಗಿದೆ ಜೊತೆಗೆ ಮೊಸರು ಸೇವನೆಯಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಚೀಸ್ ಅಥವಾ ಬೆಣ್ಣೆ: ಟೋಸ್ಟ್, ತರಕಾರಿಗಳು, ದಾಲ್ ಅಥವಾ ಚಪಾತಿಗಳನ್ನು ತಿನ್ನುವಾಗ ಹೆಚ್ಚಾಗಿ ಚೀಸ್ ಅಥವಾ ಬೆಣ್ಣೆಯನ್ನು ಬಳಸಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಮತ್ತು ವಿಟಮಿನ್ ಹೊಂದಿರುತ್ತದೆ. ಇದರಿಂದಾಗಿ ದೇಹವನ್ನು ಸಮೃದ್ಧವಾಗಿಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮೂಲಂಗಿಯಲ್ಲಿದೆ ಆರೋಗ್ಯಕರ ಗುಣಗಳು

Share This Article
Leave a Comment

Leave a Reply

Your email address will not be published. Required fields are marked *