ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

Public TV
2 Min Read

ಭೂಮಿಯಲ್ಲಿ ಬೆಳೆಯುವ ಅನೇಕ ಗಿಡ ಮೂಲಿಕೆಗಳು ರಾಮಬಾಣದಂತೆ ಇರುತ್ತದೆ. ಅದರಲ್ಲಿ ನೆಲನೆಲ್ಲಿಯೂ ಒಂದು. ನೆಲ್ಲಿಕಾಯಿ ಬಗ್ಗೆ ಎಲ್ಲರಿಗೂ ಎಲ್ಲರಿಗೂ ಗೊತ್ತೆ ಇದೆ. ಆದರೆ ಈ ನೆಲ ನೆಲ್ಲಿ ಬಗ್ಗೆ ಹಲವರಿಗೆ ಗೊತ್ತಿಲ್ಲ. ಗದ್ದೆ, ತೋಟಗಳಲ್ಲಿ ಬೆಳೆಯುವ ಈ ನೆಲನೆಲ್ಲಿ ನೋಡಲು ಪುಟ್ಟದಾಗಿದ್ದು, ಬೆಟ್ಟದಷ್ಟು ಪ್ರಯೋಜನ ಹೊಂದಿದೆ.

ಕಾಮಾಲೆ ಕಡಿಮೆ ಆಗುತ್ತೆ: ಕಾಮಾಲೆಗೆ ನೆಲನೆಲ್ಲಿ ಉಪಯುಕ್ತ ಔಷಧವಾಗಿದೆ. ನೆಲೆನೆಲ್ಲಿಯ ಬೇರನ್ನು ತೆಗೆದುಕೊಂಡು, ಪೇಸ್ಟ್ ಮಾಡಿಕೊಂಡು, ಅದಕ್ಕೆ ಹಸುವಿನ ಹಾಲನ್ನು ಸೇರಿಸಬೇಕು. ಈ ಮಿಶ್ರಣಕ್ಕೆ ಒಂದು ಚಿಟಿಕೆ ಅರಿಶಿನ ಹಾಕಿ, ಒಂದು ಚಮಚ ಮಿಶ್ರಣವನ್ನು, ದಿನಕ್ಕೆ 2-3 ಬಾರಿ ಸೇವಿಸಿದಲ್ಲಿ, ಕಾಮಾಲೆ ರೋಗವನ್ನು ಕಡಿಮೆ ಮಾಡಬಹುದು. ಹಾಗೂ ಅದರ ಅಡ್ಡ ಪರಿಣಾಮವನ್ನು ಕೂಡ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಭೇದಿ ನಿಯಂತ್ರಣ: ಭೇದಿ ಉಂಟಾದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು, ಜಜ್ಜಿ, ರಸ ತೆಗೆದು, ದಿನಕ್ಕೆ 3 ಬಾರಿ ಸೇವಿಸುವುದರಿಂದ, ಭೇದಿ ನಿಯಂತ್ರಣಕ್ಕೆ ಬರುತ್ತದೆ.

ಗಾಯ ವಾಸಿ: ನೆಲನೆಲ್ಲಿಯು ಗಾಯ ವಾಸಿ ಮಾಡುವ ಗುಣವನ್ನು ಹೊಂದಿದೆ. ನೆಲನೆಲ್ಲಿಯ ಗಿಡವನ್ನು ಬೇರು ಸಮೇತವಾಗಿ, ಜಜ್ಜಿ, ಗಾಯಕ್ಕೆ ಲೇಪಿಸುವುದರಿಂದ, ಗಾಯವು ಬೇಗ ವಾಸಿಯಾಗುತ್ತದೆ. ಇದನ್ನೂ ಓದಿ: ನೀವು ಚಹಾ ಪ್ರೇಮಿಗಳೇ? ನಿತ್ಯ ಟೀ ಕುಡಿಯೋದ್ರಿಂದ ಏನು ಪ್ರಯೋಜನ ನೋಡಿ!

ಚರ್ಮ ರೋಗ ನಿವಾರಣೆ: ಚರ್ಮ ರೋಗ ನಿವಾರಣೆಗಾಗಿ ನೆಲನೆಲ್ಲಿಯ ಎಲೆಯನ್ನು ಉಪ್ಪಿನೊಂದಿಗೆ ಅರೆದು, ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

ಜ್ವರವನ್ನು ಕಡಿಮೆ: ನೆಲನೆಲ್ಲಿಯ ಕಷಾಯ ಮಾಡುವಾಗ, ನೀರನ್ನು ಬಿಸಿಗಿರಿಸಿ, ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ, ಎಲ್ಲವನ್ನು ಕತ್ತರಿಸಿ ಹಾಕಬೇಕು, ನಂತರ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ, ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು, ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿನ, ಸ್ವಲ್ಪ ಸೈ0ಧವ ಲವಣ ಹಾಕಿ, ಒಂದು ನಿಮಿಷ ಬಿಟ್ಟು ಇಳಿಸಿ, ಸೋಸಿದರೆ, ಕಷಾಯ ಸಿದ್ದವಾಗುತ್ತದೆ. ಇದನ್ನು, 10-15 mಟ ನಷ್ಟನ್ನು ಘಂಟೆಗೊಮ್ಮೆ ಕುಡಿಯುತ್ತ ಬಂದರೆ ಇದು ಎಲ್ಲ ರೀತಿಯ ಜ್ವರಕ್ಕೂ ರಾಮಬಾಣವಾಗಿದೆ.

ನೆಲನೆಲ್ಲಿಯು ರೋಗ ನಿರೋಧಕ ಶಕ್ತಿ ಹೆಚ್ಚಳ: ನೆಲನೆಲ್ಲಿಯು ಕಿಡ್ನಿಯ ಕಲ್ಲು ಕರಗಿಸಲು ಸಹಕಾರಿಯಾಗಿದೆ. ಕಿಡ್ನಿಯ ಕಲ್ಲು ಕರಗಿಸುವಲ್ಲಿ ನೆಲನೆಲ್ಲಿಯ ಪಾತ್ರ ಮಹತ್ವದ್ದು, ಆದ್ದರಿಂದ ಇದನ್ನು ಸ್ಟೋನ್ ಬ್ರೇಕರ್ ಎಂದು ಕೂಡ ಕರೆಯುತ್ತಾರೆ. ನೆಲನೆಲ್ಲಿಯ ಜ್ಯೂಸ್ ಮಾಡಿ ಸೇವಿಸುವುದರಿಂದ ಕಿಡ್ನಿಯ ಕಲ್ಲು ನಿಧಾನವಾಗಿ ಕರಗುತ್ತಾ ಬರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *