ಸ್ಕೂಟಿ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರು ದಾರುಣ ಸಾವು

1 Min Read

ಹಾಸನ: ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ(Channarayapatna) ತಾಲ್ಲೂಕಿನ, ದೊಡ್ಢರಿ ಕಾವಲು ಗೇಟ್ ಬಳಿ ನಡೆದಿದೆ.

ರಮೇಶ್ (23), ಪುರುಷೋತ್ತಮ್ (26) ಮೃತ ದುರ್ದೈವಿಗಳು. ಮತ್ತಿಘಟ್ಟ ಗ್ರಾಮದ ರಮೇಶ್ ಹಾಗೂ ಕಿರಣ್ (22) ಸ್ಕೂಟಿಯಲ್ಲಿ ಬರುತ್ತಿದ್ದು ಅವರ ಎದುರಿನಿಂದ ಎಂ.ಹೊನ್ನೇನಹಳ್ಳಿ ಗ್ರಾಮದ ಪುರುಷೋತ್ತಮ್ ಬೈಕ್‌ನಲ್ಲಿ (Bike) ಬಂದು ಡಿಕ್ಕಿ ಹೊಡೆದಿದ್ದಾನೆ. ಇದನ್ನೂ ಓದಿ: ಯಶ್‌ ತಾಯಿ ಸೈಟ್‌ ವಿವಾದ – ಏಕಪಕ್ಷೀಯ ತೀರ್ಪಿಗೆ ಕೋರ್ಟ್ ತಾತ್ಕಾಲಿಕ ತಡೆ

 

ರಮೇಶ್‌ಗೆ ಚಿಕ್ಕವನಿದ್ದಾಗಲೇ ಹಾರ್ಟ್ ಸರ್ಜರಿಯಾಗಿದ್ದು ಹೆಲ್ಮೆಟ್ ಧರಿಸಿ ಸ್ಕೂಟಿ ಚಲಾಯಿಸುತ್ತಿದ್ದರು. ಆದರೆ ಡಿಕ್ಕಿ ರಭಸಕ್ಕೆ ಎದೆಗೆ ಬೈಕ್‌ನ ಹ್ಯಾಂಡಲ್ ಒತ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಾಳು ಕಿರಣ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article