ಮದ್ಯಪಾನ ಮಾಡಿ ಶಾಲಾ ಅಡುಗೆ ಕೋಣೆ ಮುಂದೆ ಮಲಗಿದ್ದ ಮುಖ್ಯ ಶಿಕ್ಷಕ ಅಮಾನತು

Public TV
1 Min Read

ರಾಯಚೂರು: ಫುಲ್ ಟೈಟಾಗಿ ಶಾಲೆಗೆ ಬರುತ್ತಿದ್ದ ರಾಯಚೂರಿನ ಮಸ್ಕಿ ತಾಲೂಕಿನ ಗೋನಾಳ ಶಾಲಾ ಮುಖ್ಯೋಪಾಧ್ಯಾಯ ನಿಂಗಪ್ಪ ಕೊನೆಗೂ ಅಮಾನತಾಗಿದ್ದಾರೆ.

ಈ ಹೆಡ್ ಮಾಸ್ಟರ್ ಕಂಠಪೂರ್ತಿ ಕುಡಿದು ಶಾಲಾ ಅಡುಗೆ ಕೋಣೆ ಬಾಗಿಲಲ್ಲೇ ಮಲಗಿದ್ದ. ಸುದ್ದಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ಶಿಕ್ಷಣ ಇಲಾಖೆ ಪರಿಶೀಲನೆ ನಡೆಸಿ‌ ಕ್ರಮ ಕೈಗೊಂಡಿದೆ. ಮದ್ಯಪಾನ ಮಾಡಿ ಶಾಲಾ ಆವರಣದಲ್ಲಿ ಮಲಗಿದ್ದ ಹೆಡ್‌ಮಾಸ್ಟರ್ ನಿಂಗಪ್ಪನನ್ನ ಅಮಾನತು ಮಾಡಲಾಗಿದೆ.

‌ಕರ್ತವ್ಯ ಲೋಪ, ದುರ್ನಡತೆ ಹಾಗೂ ಬೇಜವಾಬ್ದಾರಿತನ ಹಿನ್ನೆಲೆ ಅಮಾನತುಗೊಳಿಸಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಆದೇಶ ಹೊರಡಿಸಿದ್ದಾರೆ.

ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಡ್‌ಮಾಸ್ಟರ್ ಬಿಸಿಯೂಟ ಅಡುಗೆ ಮಾಡುವ ಮಹಿಳೆಯರೊಂದಿಗೂ ಅಸಭ್ಯ ವರ್ತನೆ ತೋರಿದ್ದ. ಈ ಹಿಂದೆ ಗ್ರಾಮಸ್ಥರು, ಪೋಷಕರು ಎಷ್ಟೇ ಬಾರಿ ಛೀಮಾರಿ ಹಾಕಿದ್ರು ಬದಲಾಗಿರಲಿಲ್ಲ. ನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ ಹೆಡ್‌ಮಾಸ್ಟರ್ ಈಗ ಅಮಾನತಾಗಿದ್ದಾನೆ.

Share This Article