ಸ್ನೂಕರ್‌ ಸ್ಟಿಕ್‌ನಲ್ಲಿ ಹಲ್ಲೆ ಮಾಡಿ ಹೆಡ್‌ಕುಕ್‌ ಹತ್ಯೆ – ಶವ ಸಾಗಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ

1 Min Read

ಶಿವಮೊಗ್ಗ: ಹೆಡ್‌ಕುಕ್‌ ಒಬ್ಬರನ್ನು ಹೋಟೆಲ್‌ (Hotel) ಮಾಲೀಕ ಸ್ನೂಕರ್‌ ಸ್ಟಿಕ್‌ನಲ್ಲಿ ಹಲ್ಲೆ ಮಾಡಿ ಹತ್ಯೆ ಮಾಡಿದ ಪ್ರಕರಣ ಸಾಗರದಲ್ಲಿ (Sagar) ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಬಿಹಾರ ಮೂಲದ ಟಿಂಕು ಶರ್ಮ (28) ಎಂದು ಗುರುತಿಸಲಾಗಿದೆ. ರೂಫ್ ಟಾಪ್ ಕೆಫೆ & ಗೇಮ್ ಜೋನ್‌ ಹೋಟೆಲ್ ಮಾಲೀಕ ಇಮ್ರಾನ್ (34) ಹತ್ಯೆ ಆರೋಪಿಯಾಗಿದ್ದಾನೆ. ಕೊಲೆ ಮಾಡಿ, ಕಾರಿನಲ್ಲಿ ಮೃತದೇಹ ಸಾಗಿಸುವ ವೇಳೆ ಹೋಟೆಲ್‌ ಮಾಲೀಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಒಣಹಾಕಿದ್ದ ಬಟ್ಟೆ ತರಲು ಹೋದಾಗ ಬಕೆಟ್‌ಗೆ ಬಿದ್ದು ಮಗು ಸಾವು – ಶಾಕ್‌ಗೆ ಒಳಗಾಗಿ ತಾಯಿ ಆತ್ಮಹತ್ಯೆ

ಹಣಕಾಸು ವ್ಯವಹಾರ ಹಾಗೂ ಹಣ ಕದ್ದ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಾಗರ ಟೌನ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗೂಡ್ಸ್ ವಾಹನ ಪಲ್ಟಿ- ಲಕ್ಷಾಂತರ ರೂ. ಮೌಲ್ಯದ ಸೇಬುಗಳು ರಸ್ತೆ ಪಾಲು

Share This Article