ಮದ್ವೆ ವೇಳೆ ಕೊಟ್ಟಿದ್ದ ಫ್ಲ್ಯಾಟ್ ತನ್ನ ಹೆಸರಿಗೆ ಬರೆದುಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದ!

Public TV
2 Min Read

ಹೈದರಾಬಾದ್: ಹೆಚ್ಚಿನ ವರದಕ್ಷಿಣೆಗಾಗಿ ಪತಿಯೊಬ್ಬ ತನ್ನ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಹೈದರಾಬಾದ್ ನ ಬಂಜಾರಾ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಸೀಮಾ(19) ಎಂಬಾಕೆಯೇ ತನ್ನ ಪತಿ ಸಿರಾಜ್ ನಿಂದ ಕೊಲೆಯಾದ ದುರ್ದೈವಿ ಮಹಿಳೆ. ಆರೋಪಿ ಸಿರಾಜ್ ಸನತ್ ನಗರ್ ಎಂಬಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದು, ಈತ ಕಳೆದ ವರ್ಷ ಶ್ರೀ ಕಷ್ಣ ನಗರದ ಅಸೀಮಾಳನ್ನು ಮದುವೆಯಾಗಿದ್ದನು.

ಮದುವೆ ಸಂದರ್ಭದಲ್ಲಿ ಸಿರಾಜ್, ಅಸೀಮಾ ಮನೆಯಿಂದ 1.5 ಲಕ್ಷ ನಗದು, 200 ಗ್ರಾಂ ಚಿನ್ನ ಹಾಗೂ 50 ಲಕ್ಷ ಮೌಲ್ಯದ ಫ್ಲ್ಯಾಟ್ ನ್ನು ವರದಕ್ಷಿಣೆಯಾಗಿ ಪಡೆದಿದ್ದನು. ಇದುವರೆಗೆ ಆ ಫ್ಲ್ಯಾಟ್ ಅಸೀಮಾಳ ಹೆಸರಲ್ಲಿದೆ. ಇದೀಗ ಅದನ್ನು ತನ್ನ ಹೆಸರಿಗೆ ಬರೆದುಕೊಡಬೇಕಾಗಿ ಅಸೀಮಾ ತಂದೆಗೆ ಸಿರಾಜ್ ಪೀಡಿಸುತ್ತಿದ್ದನು.

ಇದೇ ವಿಚಾರಕ್ಕೆ ಆಗಾಗ ಅಸೀಮಾ ಹಾಗೂ ಪತಿ ಸಿರಾಜ್ ಮಧ್ಯೆ ಜಗಳ ನಡೆಯುತ್ತಿತ್ತು. ಆಗಸ್ಟ್ 18ರಂದು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಗಲಾಟೆ ತಾರಕಕ್ಕೇರಿದ್ದು, ಆಸೀಮಾಳಿಗೆ ಥಳಿಸಿ ಮನೆಯಿಂದ ಹೊರಗೆ ಹಾಕಿದ್ದನು. ಗಂಡನ ಕೃತ್ಯದಿಂದಾಗಿ ಮನೆಯಿಂದ ಹೊರಗಡೆಯಿದ್ದ ಅಸೀಮಾ ತನ್ನ 4 ತಿಂಗಳ ಗಂಡು ಮಗುವಿನೊಂದಿಗೆ ನೇರವಾಗಿ ತವರು ಮನೆಗೆ ತೆರಳಿದ್ದಾಳೆ.

ಹೀಗೆ ಮನೆಗೆ ತೆರಳಿದ ಅಸೀಮಾ, ನಡೆದ ಘಟನೆಯನ್ನು ತನ್ನ ತಂದೆಯ ಬಳಿ ವಿವರಿಸಿದ್ದಾಳೆ. ಮಗಳ ಅಳಲನ್ನು ಆಲಿಸಿದ ತಂದೆ, ಅಳಿ ಸಿರಾಜ್ ಬಳಿ ಮಾತುಕತೆ ನಡೆಸಿ ಸಂಧಾನ ಮಾಡಿ ಮತ್ತೆ ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದಾರೆ. ಆದ್ರೆ ಭಾನುವಾರ ಮುಂಜಾನೆ ಕುಟುಂಬಸ್ಥರು ಮಲಗಿದ್ದ ಸಂದರ್ಭದಲ್ಲಿ ಪತಿ ಸಿರಾಜ್ ತಾವು ಮಲಗಿದ್ದ ಕೊಣೆಯ ಬಾಗಿಲು ಹಾಕಿಕೊಂಡು ಪತ್ನಿ ಅಸೀಮಾಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅಸೀಮಾ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕೃತ್ಯದ ಬಳಿಕ ಸಿರಾಜ್ ಹಾಗೂ ಆತನ ಕುಟುಂಬಸ್ಥರು ತಲೆಮರೆಸಿಕೊಂಡಿದ್ದಾರೆ.

 

ಇತ್ತ ಮಗಳ ಮೇಲಿನ ಕೃತ್ಯದ ವಿಚಾರ ತಿಳಿದ ಕೂಡಲೇ ಅಸೀಮಾ ತಂದೆ ಆಕೆಯ ಮನೆಯ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಮಗಳನ್ನು ನೋಡಿ ಬರಲು ತಿಳಿಸಿದ್ದಾರೆ. ಆದ್ರೆ ಅದಾಗಲೇ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಅವರು ಶಾಕ್ ಗೆ ಒಳಗಾಗಿದ್ದಾರೆ. ಕೂಡಲೇ ಬಂಜಾರಾ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಅಸೀಮಾ ತಂದೆಯ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಲೆಮರೆಸಿಕೊಂಡಿರು ಆರೋಪಿ ಸಿರಾಜ್ ಗಾಗಿ ಪೊಲೀಸರು ಆತನ ಫೋನ್ ಟ್ರೇಸ್ ಮಾಡಿದ್ದಾರೆ. ಆದ್ರೆ ಅದಾಗಲೇ ಆತ ತಾನೆಲ್ಲಿದ್ದೇನೆ ಅನ್ನೋದು ಗೊತ್ತಾಗದಂತೆ ಸಿಗ್ನಲ್ ಡಿಸ್ ಕನೆಕ್ಟ್ ಮಾಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *