ಹೆಚ್‌.ಡಿ.ರೇವಣ್ಣ 4 ದಿನ ಎಸ್‌ಐಟಿ ಕಸ್ಟಡಿಗೆ

Public TV
1 Min Read

ಬೆಂಗಳೂರು: ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ (H.D.Revanna) ಅವರನ್ನು 4 ದಿನ ಎಸ್‌ಐಟಿ (SIT) ವಶಕ್ಕೆ ನೀಡಿ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ನೋಟಿಸ್‌ ನೀಡಿದರೂ ವಿಚಾರಣೆಗೆ ಗೈರಾಗಿದ್ದ ರೇವಣ್ಣ ಅವರನ್ನು ಎಸ್‌ಐಟಿ ತಂಡ ನಿನ್ನೆ ದೇವೇಗೌಡರ ನಿವಾಸದಲ್ಲಿ ಬಂಧಿಸಿತ್ತು. ಇಂದು ವೈದ್ಯಕೀಯ ಪರೀಕ್ಷೆ ಬಳಿಕ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್‌ ನ್ಯಾಯಾಧೀಶರು, ರೇವಣ್ಣರನ್ನು ಎಸ್‌ಐಟಿ ವಶಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಇದೊಂದು ರಾಜಕೀಯ ಷಡ್ಯಂತ್ರ: ಬಂಧನ ಬಳಿಕ ಹೆಚ್‌.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ

ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಎಸ್‌ಐಟಿ ತಂಡ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿತು. ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ಡಿ. ನಾಯ್ಕ್‌ ಆಕ್ಷೇಪ ವ್ಯಕ್ತಪಡಿಸಿದರು. ಜಾಮೀನು ನೀಡುವಂತೆ ಮನವಿ ಮಾಡಿದರು. ಸಂತ್ರಸ್ತೆ ಸಿಕ್ಕಿದ್ದಾರೆ. ರೇವಣ್ಣಗೂ ಅಪಹರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಕೀಲರು ವಾದ ಮಂಡಿಸಿದರು.

ಮಾಜಿ ಸಚಿವರ ವಿರುದ್ಧ ಸುಮಾರು 15 ಕ್ಕೂ ಹೆಚ್ಚು ಅಂಶಗಳನ್ನು ಉಲ್ಲೇಖಿಸಿ ಎಸ್‌ಐಟಿ 5 ದಿನ ಕಸ್ಟಡಿಗೆ ಕೇಳಿತು. ಈ ವೇಳೆ ಹೆಚ್‌.ಡಿ.ರೇವಣ್ಣ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ಮಾಡಿದ್ದಾರೆ. ರಾಜಕೀಯ ವಿರೋಧಿಗಳ ಷಡ್ಯಂತ್ರ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ಇದನ್ನೂ ಓದಿ: ಹಾಸನದಿಂದ ಪ್ರಜ್ವಲ್ ಈಗ ಗೆದ್ದರೆ ಅಮಾನತು ಮಾಡ್ತೀವಿ: ಆರ್.ಅಶೋಕ್

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ರವೀಂದ್ರಕುಮಾರ್‌ ಬಿ.ಕಟ್ಟೀಮನಿ, ರೇವಣ್ಣರನ್ನು 4 ದಿನ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು. ಮೇ 8 ರವರೆಗೆ ಮಾಜಿ ಸಚಿವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ವಹಿಸಲಾಗಿದೆ.

Share This Article