ರೇವಣ್ಣ ಕುಟುಂಬಕ್ಕೆ ಕಾನೂನು ಸಂಕಷ್ಟ – ಯಾರ ವಿರುದ್ಧ ಏನೇನು ಪ್ರಕರಣ?

Public TV
1 Min Read

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಇಡೀ ಕುಟುಂಬ (HD Revanna family) ಈಗ ಕಾನೂನು ಕಟ್ಟಳೆಯಲ್ಲಿ ಸಿಲುಕಿದೆ.

ಕೆಲ ದಿನಗಳ ಹಿಂದೆಯಷ್ಟೇ ಪ್ರಜ್ವಲ್ ರೇವಣ್ಣ (Prajwal Revanna) ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ್ದಾರೆ ಎಂಬ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಬಂಧನಕ್ಕೆ ಒಳಗಾಗಿದ್ದರು. ಆ ಬಳಿಕ ಪ್ರಜ್ವಲ್ ರೇವಣ್ಣ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದರು. ಈ ಬೆನ್ನಲ್ಲೇ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ (Bhavani Revanna) ಅವರಿಗೂ ಎಸ್‌ಐಟಿ ನೋಟಿಸ್ ಕೊಟ್ಟು ಬಂಧನಕ್ಕೆ ಮುಂದಾಗಿತ್ತು. ಅಷ್ಟರಲ್ಲಿ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹೆಚ್.ಡಿ ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ರೇವಣ್ಣ (Suraj Revanna) ಅವರ ಬಂಧನವಾಗಿದೆ.

ಯಾರ ವಿರುದ್ಧ ಏನು ಪ್ರಕರಣ?
ರೇವಣ್ಣ, ಮಾಜಿ ಸಚಿವ
ಆರೋಪ: ಕೆ.ಆರ್.ನಗರ ಮೂಲದ ಅತ್ಯಾಚಾರ ಸಂತ್ರಸ್ತೆ ಅಪಹರಣ
ಜೈಲು ಶಿಕ್ಷೆ ಬಳಿಕ ಜಾಮೀನು

ಭವಾನಿ, ರೇವಣ್ಣ ಪತ್ನಿ
ಆರೋಪ: ಕೆ.ಆರ್.ನಗರ ಮೂಲದ ಅತ್ಯಾಚಾರ ಸಂತ್ರಸ್ತೆಗೆ ಬೆದರಿಕೆ
ಎಸ್‌ಐಟಿ ನೋಟಿಸ್ ಬಳಿಕ ನಿರೀಕ್ಷಣಾ ಜಾಮೀನು

ಪ್ರಜ್ವಲ್, ರೇವಣ್ಣ 2ನೇ ಮಗ
ಆರೋಪ: ಅತ್ಯಾಚಾರ, ಲೈಂಗಿಕ ದೌರ್ಜನ್ಯ
ಜೈಲು; ಸದ್ಯಕ್ಕೆ ಎಸ್‌ಐಟಿ ವಿಚಾರಣೆ

ಸೂರಜ್, ರೇವಣ್ಣ ಮೊದಲ ಮಗ
ಆರೋಪ: ಅಸಹಜ ಲೈಂಗಿಕ ದೌರ್ಜನ್ಯ
ಹಾಸನ ಸೆನ್ ಪೊಲೀಸರಿಂದ ಬಂಧನ, ಸಿಐಡಿ ತನಿಖೆಗೆ ಕೇಸ್ ವರ್ಗ

ರೇವಣ್ಣ ಕುಟುಂಬದ ಮೇಲೆ ಕಾನೂನು ಅಸ್ತ್ರ
ರೇವಣ್ಣ – ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ, ಕೆ.ಆರ್ ನಗರ ಪ್ರವೇಶ ಮಾಡುವಂತೆ ಇಲ್ಲ
ಭವಾನಿ – ನಿರೀಕ್ಷಣಾ ಜಾಮೀನು – ಮೈಸೂರು ಹಾಸನ ಪ್ರವೇಶ ಇಲ್ಲ
ಪ್ರಜ್ವಲ್ – 3 ಅತ್ಯಾಚಾರ ಪ್ರಕರಣ – ಸದ್ಯ ಸೋಮವಾರದ ವರೆಗೆ ಪೊಲೀಸ್ ಕಸ್ಟಡಿ – ಬಳಿಕ ಜೈಲು ಸಾಧ್ಯತೆ
ಸೂರಜ್ – ಜಾಮೀನು ರಹಿತ ಪ್ರಕರಣದಲ್ಲಿ ಅರೆಸ್ಟ್, ತನಿಖೆ ಪ್ರಗತಿಯಲ್ಲಿದೆ.

Share This Article