ಕನಕಪುರ ಡೈರಿಗೆ ಜಾಗ ಕೊಟ್ಟ ರೈತರಿಗೆ ಎಷ್ಟು ಕೊಟ್ರಿ, ನಿಮ್ಮ ಪಟಾಲಂಗೆ ಎಷ್ಟು ಕೊಟ್ರಿ – ಡಿಕೆಶಿಗೆ ಹೆಚ್‍ಡಿಕೆ ಪ್ರಶ್ನೆ

Public TV
2 Min Read

ಬೆಂಗಳೂರು: ಕನಕಪುರದಲ್ಲಿ (Kanakapura) ಮಿಲ್ಕ್ ಪೌಡರ್ ಮಾಡಲು ಭೂಮಿ ಖರೀದಿಗೆ ರೈತರಿಗೆ ಪರಿಹಾರ ಕೊಟ್ರಾ? ನಿಮ್ಮ ಪಟಾಲಂಗಳಿಗೆ ಕೊಟ್ರಾ? ಯಾರಿಗೆ ಎಷ್ಟೆಲ್ಲಾ ಕೊಟ್ಟಿದ್ದೀರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‍ಡಿಕೆ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.

ರಾಮನಗರಕ್ಕೆ ನಿಮ್ಮ ಕೊಡುಗೆ ಏನು ಎಂದು ಹೆಚ್‍ಡಿಕೆಗೆ ಡಿಕೆ ಶಿವಕುಮಾರ್ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಈಗ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಹೊರಟಿದ್ದೀರಿ. ಈ ಮೂಲಕ ಬೆಂಗಳೂರು (Bengaluru) ಬ್ರ್ಯಾಂಡ್ ಹೆಸರನ್ನು ವಿಸ್ತರಣೆ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿದ್ದೀರಾ? ಕಸದ ರಾಶಿ ಇದು ಎಂದು ಫೋಟೋ ತೋರಿಸಿ, ಇದು ನಿಮ್ಮ ಬ್ರ್ಯಾಂಡ್ ಬೆಂಗಳೂರಾ ಎಂದು ಡಿಕೆಶಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಾನು ಸಿದ್ದರಾಮಯ್ಯಗೆ ರಾಜಕೀಯ ವಿಲನ್ನೇ: ಹೆಚ್‍ಡಿಕೆ ವಾಗ್ದಾಳಿ

ಬಿಡದಿಯಲ್ಲಿ ಜಪಾನ್ ಟೌನ್ ಶಿಪ್ ತರುವ ಯೋಜನೆ ಇತ್ತು. ಕಾಂಗ್ರೆಸ್ ಯಾಕೆ ತಂದಿಲ್ಲ? ಯಾರು ಜಮೀನು ಮಾರಬೇಡಿ ಎನ್ನುತ್ತಿದ್ದಾರೆ. ಕನಕಪುರದಲ್ಲಿ 50 ಎಕ್ರೆ ಜಾಗದಲ್ಲಿ ಮೆಗಾ ಡೈರಿ ಆರಂಭಿಸಿದ್ದೀರಿ. ಈ ಡೈರಿಗೆ ಜಾಗ ನೀಡಿದ ರೈತರಿಗೆ ಎಷ್ಟು ಕೊಟಿದ್ದೀರಿ? ರೈತರಿಗೆ 50 ಸಾವಿರ ರೂ. ನಿಂದ 1 ಲಕ್ಷ ರೂ. ಪರಿಹಾರ ಧನ ಕೊಟ್ಟಿದ್ದಾರೆ. ಆದರೆ ಡಿಕೆಶಿ ಪಟಾಲಂನವರು 55 ಲಕ್ಷ ರೂ. ಪರಿಹಾರ ತೆಗೆದುಕೊಳ್ಳುತ್ತಾರೆ. ಇದು ಇವರ ಇತಿಹಾಸ ಎಂದು ಕಿಡಿಕಾರಿದರು.

ವಿಜಯದಶಮಿ ಆಚರಣೆ ವೇಳೆ ಸಿಎಂ ಮತ್ತು ಡಿಸಿಎಂ ಅವರು ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ಮಾಡಿದ್ದಾರೆ. ಡಿಸಿಎಂ ಅವರು ಟಿಆರ್‌ಪಿ ಜಾಸ್ತಿ ಇರುವ ಸುದ್ದಿವಾಹಿನಿಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಅವರ ಆಹ್ವಾನವನ್ನು ಸ್ವೀಕರಿಸುತ್ತೇನೆ. ನಾನು ಪಲಾಯಾನ ಮಾಡುವವನಲ್ಲ. ನನ್ನ ಬಳಿ ಅಷ್ಟು ಸರಕುಗಳು ಇದೆ ಎಂದು ಚರ್ಚೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಇನ್ನೂ ಸಿಎಂ ಅವರು ಆರ್ಥಿಕ ವಿಚಾರ ಸಂಬಂಧ ಶ್ವೇತ ಪತ್ರ ಹೊರಡಿಸುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಸ್ವಾಗತ ಮಾಡ್ತೀನಿ. ಬಿಜೆಪಿ ಆಡಳಿತದಿಂದ ಆರ್ಥಿಕ ವ್ಯವಸ್ಥೆ ಕುಸಿದಿದೆ ಎಂದು ಹೇಳುತ್ತಾರೆ. ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು 15 ಲಕ್ಷ ಮನೆಗಳನ್ನು ಕೊಡುವುದಾಗಿ ಚುನಾವಣೆ ಮುಂಚೆ ಘೋಷಣೆ ಮಾಡಿದ್ದರು. ಅವರು ಮನೆ ಕಟ್ಟೋಕೆ 2700 ಕೋಟಿ ರೂ. ಹಣ ಇಟ್ಟಿದ್ದಾರೆ. ಮೊದಲು 29 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದಿದ್ದರು. ನೀರಾವರಿಗೆ 1 ಲಕ್ಷ ಕೋಟಿ ರೂ. ಇಡುವುದಾಗಿ ಚುನಾವಣೆ ವೇಳೆ ಘೋಷಣೆ ಮಾಡಿದ್ದರು. ಬಜೆಟ್ ನಲ್ಲಿ ಎಷ್ಟು ಇಟ್ಟಿದ್ದಾರೆ ಎಂದು ಹೆಚ್‍ಡಿಕೆ ಪ್ರಶ್ನಿಸಿದರು.

1500 ಕೋಟಿ ರೂ. ಯಾವುದೇ ವರ್ಕ್ ಆರ್ಡರ್ ಇಲ್ಲದೇ ಕಂಟ್ರಾಕ್ಟರ್‍ಗೆ ಕೊಟ್ಟು ಹೊಗಿದ್ದರು. ನಿಯಮ ಮೀರಿ ಲೂಟಿ ಹೊಡೆಯಲು ಹಣ ಬಿಡುಗಡೆ ಮಾಡಿದ್ದರು. ಹಣಕಾಸು ಇಲಾಖೆ ಅನುಮತಿ ಇಲ್ಲದೆ 1,500 ಕೋಟಿ ರೂ. ಹೇಗೆ ಬಿಡುಗಡೆ ಮಾಡಿದ್ದೀರಿ? ಇದೆಲ್ಲ ಅಧಿವೇಶನದಲ್ಲಿ ಮಾತನಾಡುತ್ತೇನೆ. ನಿಮ್ಮ ಪ್ರಜ್ಞಾವಂತಿಕೆ ನನಗೆ ಬೇಡ. ನಮ್ಮ ಮೈತ್ರಿ ಬಗ್ಗೆ ಈಗ ಮಾತನಾಡುವುದು ಬೇಡ. ಮೇಲಿನ ಎಲ್ಲಾ ವಿಚಾರಗಳನ್ನು ನಾನು ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿ ಕಿಡಿಕಾರಿದರು. ಇದನ್ನೂ ಓದಿ: ಧರ್ಮಸ್ಥಳಕ್ಕೆ ಬರಲು ನಾನು ಸಿದ್ಧ- ಬಾಲಕೃಷ್ಣ ಸವಾಲು ಸ್ವೀಕರಿಸಿದ ಹೆಚ್‍ಡಿಕೆ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್