– ಎಲೆಕ್ಟ್ರಿಕ್ ಕಾರು ಉತ್ಪಾದನಾ ಯೋಜನೆಗೆ 4,150 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದ ಸಚಿವ
ನವದೆಹಲಿ: ಅಮೆರಿಕದ ಟೆಸ್ಲಾ ಸಂಸ್ಥೆಯು ಭಾರತದಲ್ಲಿ 2 ಶೋ ರೂಮ್‌ಗಳನ್ನು ತೆರೆಯುವ ಆಸಕ್ತಿ ಮಾತ್ರ ಹೊಂದಿದೆ. ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಹೊಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
#WATCH | Delhi: Union Minister of Heavy Industries and Steel, HD Kumaraswamy says “…Tesla only wants to start two showrooms. Tesla is not interested in manufacturing in India…”
A ministry official not in the camera frame says “As of today, this is the information with us.… pic.twitter.com/E1DBkWAPWE
— ANI (@ANI) June 2, 2025
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಯೋಜನೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇದು ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ. ಬೃಹತ್ ಮಟ್ಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಯೋಜನೆ ಜಾರಿಗೆ ತರುವ ಚಿಂತನೆ ನಡೆಸಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ. ಇದನ್ನೂ ಓದಿ: ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು
ವಿಶ್ವ ಮಟ್ಟದಲ್ಲಿ ಎಲೆಕ್ಟ್ರಿಕ್ ಯೋಜನೆಗಳಿಗೆ ಭಾರತ ಹೆಸರುವಾಸಿ. 2024 ರಲ್ಲಿ ಈ ಯೋಜನೆ ಆರಂಭ ಮಾಡಲು ನಿರ್ಧರಿಸಿತ್ತು. ಈ ಯೋಜನೆಯಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತದೆ. ಈಗಾಗಲೇ 4,150 ಕೋಟಿಗಳನ್ನು ಹೂಡಿಕೆ ಮಾಡಲಾಗಿದೆ. ವರ್ಷಕ್ಕೆ 8 ಸಾವಿರ ವಾಹನಗಳ ಆಮದಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಬೆನ್ಜ್, ಸ್ಕೋಡಾ, ಕಿಯಾ, ಕಂಪನಿಗಳು ಈ ಯೋಜನೆಗೆ ಆಸಕ್ತಿ ತೋರಿವೆ. ಇನ್ನೂ ಟೆಸ್ಲಾ 2 ಶೋ ರೂಮ್ ತೆರೆಯಲು ಆಸಕ್ತಿ ತೋರಿದೆ ಆದ್ರೆ, ಭಾರತದಲ್ಲಿ ಕಾರು ಉತ್ಪಾದನೆ ಮಾಡುವ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.
ಮುಂದುವರಿದು… ಯಾವುದೇ ಕಂಪನಿ ಕಾರು ತಯಾರಿಸಲು ಅವಕಾಶ ಇದೆ. ಮುಂದಿನ ಮೂರು ವರ್ಷಗಳ ಕಾಲ 15% ತೆರಿಗೆ ವಿನಾಯಿತಿ ನೀಡಲಾಗಿದೆ, ಈ ಕಾರ್ಯಕ್ರಮ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮುಂಗಡ ಹಣ ಕಟ್ಟಬೇಕು. ಒಂದು ವೇಳೆ ಬುಕ್ಕಿಂಗ್ ಮಾಡಿದ ಬಳಿಕ ಹಿಂದೇಟು ಹಾಕಿದ್ರೆ ಮುಂಗಡ ಹಣ ವಾಪಸ್ ನೀಡಲಾಗುವುದಿಲ್ಲ. ಲ್ಯಾಂಡ್ ಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಂಪು ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಟೆಸ್ಲಾ ಹಲವಾರು ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸುತ್ತಿದೆ. ಇವುಗಳಲ್ಲಿ ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣ ಸೇರಿವೆ. ಈಗಾಗಲೇ ಇದಕ್ಕೆ ಜಾಗವನ್ನೂ ಗುರುತು ಮಾಡಲಾಗಿದ್ದು, ನೇಮಕಾತಿ ಕೂಡ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟೆಸ್ಲಾ ಭಾರತ ಎಂಟ್ರಿಯಿಂದ ಟಾಟಾ ಗ್ರೂಪ್‌ಗೆ ಲಾಭ!