ಜನರಿಗೆ ಬೆಲೆ ಏರಿಕೆ ಚರ್ಚೆಯ ವಿಷಯ ಅಲ್ಲ, ಮಾತಿನಲ್ಲೇ ಅಭಿವೃದ್ಧಿ ಮಾಡುವವವರು ಇಷ್ಟ: ಹೆಚ್‍ಡಿಕೆ

Public TV
1 Min Read

ಬೆಂಗಳೂರು: ಜನ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರು ಸಮೃದ್ಧವಾಗಿದ್ದಾರೆ. ಜನರಿಗೆ ಬೆಲೆ ಏರಿಕೆಗಿಂತ ಭಾವನಾತ್ಮಕ ವಿಷಯಗಳೇ ಹೆಚ್ಚು ಖುಷಿ ನೀಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ವಿಧಾನಸೌಧದಲ್ಲಿ ಪಂಚರಾಜ್ಯ ಚುನಾವಣೆಯ ನಂತರ ಬೆಲೆ ಏರಿಕೆ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಗ್ಯಾಸ್ ಮತ್ತಿತರ ಬೆಲೆ ಏರಿಕೆ ಆಗಿದೆ. ಜನ ಇಂದು ಹಣವಂತರಾಗಿದ್ದಾರೆ. ಮೌನವಾಗಿ ಬೆಂಬಲಿಸಿದ್ದಾರೆ. ಜನರಿಗೆ ಈಗ ಧರ್ಮದ ಅವಶ್ಯಕತೆ ಇದೆ. ಸಮಸ್ಯೆಗಳ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ ಎಂದರು.

ಭಗವದ್ಗೀತೆ, ದೇಶ, ಭಾಷೆ, ಧರ್ಮ ಜನರಿಗೆ ಬೇಕಾಗಿದೆ. ಜನ ಎಷ್ಟೇ ಬೆಲೆ ಏರಿಕೆ ಆದರೂ ಕೊಡಲು ಸಿದ್ಧರಿದ್ದಾರೆ. ಮೋದಿ ಮಾತಿನಿಂದಲೆ ಅಭಿವೃದ್ಧಿಯಾಗಿದ್ದಾರೆ. ಬೆಲೆ ಏರಿಕೆ ಈಗ ಜನರಿಗೆ ಚರ್ಚೆಯ ವಿಷಯ ಅಲ್ಲ. ಏನಿದ್ದರೂ ಭಾವನಾತ್ಮಕ ಮೋಡಿ ಮಾಡುವ ಮಾತುಗಳೇ ಪ್ರಿಯ. ಮಾತಿನಲ್ಲೇ ಅಭಿವೃದ್ಧಿ ಮಾಡುವವವರೇ ಇಷ್ಟ ಎಂದು ಟೀಕಿಸಿದರು. ಇದನ್ನೂ ಓದಿ:  ತಮಿಳುನಾಡು ವಿಧಾನಸಭೆ ನಿರ್ಣಯಕ್ಕೆ ಬೆಲೆ ಇಲ್ಲ: ಬೊಮ್ಮಾಯಿ

ಬಿಡಿಎ ಬ್ರೋಕರ್‌ಗಳ ಮೇಲೆ ಎಸಿಬಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಎಸಿಬಿಯಿಂದ ಇತ್ತೀಚಿನ ದಾಳಿ ಪ್ರಕರಣವನ್ನು ನೋಡುತ್ತಿದ್ದೇನೆ ಎಂದ ಅವರು, ಎಷ್ಟು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಎಷ್ಟು ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು ಆಗಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ನಲ್ಲಿ ಏನಿದೆ?: ಹೆಚ್‍ಡಿಕೆ ಪ್ರಶ್ನೆ

ಕೇವಲ ಎಸಿಬಿ ದಾಳಿ ನಡೆಸಿದರೆ ಪರಿಣಾಮ ಸಿಗಲ್ಲ. ಏನು ಕ್ರಮ ಆಗಿದೆ ಅನ್ನೋದು ಯಾರಿಗೂ ಮಾಹಿತಿ ಇಲ್ಲ. ಐ ವಾಷಿಂಗ್‍ಗೋಸ್ಕರ ಎಸಿಬಿ ದಾಳಿ ನಡೆಯುತ್ತಿದೆ. ಎಸಿಬಿ ರೈಡ್ ತೋರ್ಪಡಿಕೆಗೆ ನಡೆಯುತ್ತಿದೆ. ಯಾವುದೇ ಪರಿಣಾಮ ಆಗುತ್ತಿಲ್ಲ. ಬಿಡಿಎಯಂತಹ ಆಯಕಟ್ಟಿನ ಸ್ಥಳಗಳಿಗೆ ಅಂತಹ ಭ್ರಷ್ಟ ಅಧಿಕಾರಿಗಳನ್ನೆ ತಂದು ಕೂರಿಸ್ತಾರೆ. ಮತ್ತೆ ಅಂತವರ ವಿರುದ್ಧ ಏನು ಕ್ರಮ ಆಗುತ್ತೆ. ಯಾರಿಗೆ ಇದುವರೆಗೆ ಶಿಕ್ಷೆ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂದು ದೇವೇಗೌಡ್ರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ: ಎಚ್‍ಡಿಕೆ

Share This Article
Leave a Comment

Leave a Reply

Your email address will not be published. Required fields are marked *