ತಮ್ಮ ಪಕ್ಷದ ಕಾರ್ಯಕರ್ತನ ಉಳಿಸಲಾಗದ ಸರ್ಕಾರ, ರಾಜ್ಯದ ಜನತೆಯನ್ನು ರಕ್ಷಿಸಲು ಸಾಧ್ಯವೇ: ಹೆಚ್‌ಡಿಕೆ

By
2 Min Read

ಬೆಂಗಳೂರು: ತಮ್ಮ ಪಕ್ಷದ ಕಾರ್ಯಕರ್ತನ ಉಳಿಸಲಾಗದ ಸರ್ಕಾರ, ರಾಜ್ಯದ ಜನತೆಯನ್ನು ರಕ್ಷಿಸಲು ಸಾಧ್ಯವೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯುವಕನ ಕುಟುಂಬ ಹೇಳಿದೆ ಆತನ ಕೊಲೆಗೆ ಎರಡು ವರ್ಷದಿಂದ ಸಂಚು ಎಂದಿದ್ದಾರೆ. ಹಾಗಾದರೆ ಸರ್ಕಾರ ಏನು ಮಾಡುತ್ತಿತ್ತು. ಅಮಾಯಕರ ಬಲಿ ಪಡೆದು ರಾಜಕೀಯ ಮಾಡುತ್ತಿದ್ದಾರೆ. ನಾನು ಹಲವು ದಿನಗಳ ಹಿಂದೆನೇ ಹೇಳಿದ್ದೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳು ಯಾವ ಹಂತಕ್ಕಾದರೂ ಹೋಗಬಹುದು ಎಂದ ಅವರು, ಚುನಾವಣೆಗೆ ವರ್ಷವಿರುವಾಗ ಇಂತಹ ಘಟನೆ ನಡೆದಿದೆ ಅಂದರೆ ಏನು ಅರ್ಥ. ಇಂತಹ ಘಟನೆಗಳು ನಾಂದಿಯಾಗ್ತಾ ಇದೆಯಾ ಎಂಬ ಆತಂಕ ಶುರುವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಎರಡು ವರ್ಷದ ಹಿಂದೆಯೇ ಹತ್ಯೆಗೆ ಚಿಂತನೆ ನಡೆದಿದೆ ಎಂದು ಅವರ ಕುಟುಂಬ ಸಂಬಂಧಿಕರು ಹೇಳುತ್ತಿದ್ದರು. 10ಲಕ್ಷ ಘೋಷಿಸಿದ್ದರು ಎಂದು ಹೇಳಿದ್ದಾರೆ. ಎರಡು ವರ್ಷಗಳ ಹಿಂದೆಯೇ ಇದು ಹೊರಬಿದ್ದಿದೆ. ಇದು ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ನಿಮ್ಮ ಸದಸ್ಯನನ್ನು ರಕ್ಷಣೆ ಮಾಡಲು ನಿಮಗೆ ಆಗಲಿಲಲ್ವೇ ಎಂದು ಪ್ರಶ್ನಿಸಿದರು.

ಇದು ಸ್ಯಾಂಪಲ್ಲೋ ಏನೋ ಗೊತ್ತಿಲ್ಲ. ಟ್ರೈಲರ್ ಬಿಡ್ತಾರೆ ಮುಂದೆ ಪಿಚ್ಚರ್ ಬಿಡುತ್ತಾರೆ. ಇದನ್ನು ನೋಡಿದರೆ ಪ್ರಾರಂಭಿಕ ಅನ್ನಿಸುತ್ತದೆ. ಸರ್ಕಾರ ಇದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕು. ಡಿಕೆಶಿ ಪ್ರಚೋದನೆ ಮಾಡುತ್ತಾರೆ ಎನ್ನುವುದನ್ನು ಹೇಳುತ್ತಿರಾ. ಅದನ್ನು ಹೇಗೆ ಕಟ್ ಮಾಡಬೇಕು ಅಂತ ನಿಮಗೆ ಗೊತ್ತಿಲ್ವಾ? ಯಾಕೆ ನೀವು ಸುಮ್ಮನಾಗಿದ್ದು ಎಂದು ವಾಗ್ದಾಳಿ ನಡೆಸಿದರು.

ನಮ್ಮ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ್ದಾರೆ. ರಾಜ್ಯದ ಪ್ರಮುಖ ವಿಚಾರಗಳ ಚರ್ಚೆಗೆ ಅವಕಾಶ ಸಿಗಲಿಲ್ಲ. ಇವತ್ತು, ನಾಳೆ ಸದನ ಮುಂದೂಡಬಹುದು. ಬಜೆಟ್ ಅಧಿವೇಶನದವರೆಗೆ ಮುಂದೂಡಬಹುದು. ಬೆಳಗಾವಿಯಲ್ಲೂ ಮತಾಂತರ ನಿಷೇಧ ಕಾಯ್ದೆ ತಂದರು. ಯಾವುದೇ ಸಮಸ್ಯೆ ಚರ್ಚೆಯಿಲ್ಲದೆ ಮುಕ್ತಾಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಈ ಕೊಲೆ ಮಾಡಿಸಿರುವುದೇ ಈಶ್ವರಪ್ಪ – ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ

ಈಗಿನ ಸದನವೂ ನೀವೇ ನೋಡುತ್ತಿದ್ದೀರ. ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗ್ಗೆ ಹಿಂದೆಯೇ ಹೇಳಿದ್ದೆ. ಅಮಾಯಕ ಮಕ್ಕಳ ಬಲಿಯಾಗಬಹುದು ಎಂದಿದ್ದೆ. ಈಗ ಶಿವಮೊಗ್ಗದಲ್ಲಿ ಅಮಾಯಕ ಯುವಕನ ಬಲಿಯಾಗಿದೆ. ಮುಖಂಡರು ಆ ಯುವಕನ ಮನೆಗೆ ಹೋಗುವುದು. ಸಾಂತ್ವನ ಹೇಳುವುದು ಮಾಡುತ್ತಿರೆ. 3 ದಿನ ಆದ ಮೇಲೆ ಅತ್ತ ಯಾರೂ ಸುಳಿಯಲ್ಲ. ಆ ಅಮಾಯಕನ ಕುಟುಂಬದ ಬಗ್ಗೆ ಕೇಳುವವರಿರಲ್ಲ. ಮಕ್ಕಳು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ತಮ್ಮ ಕುಟುಂಬದ ಬಗ್ಗೆ ಯಾರೂ ನೋಡಲ್ಲ. ಇದನ್ನು ಮಕ್ಕಳು ಅರ್ಥ ಮಾಡಿಕೊಂಡರೆ ಸಾಕು ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *