– ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಪರಂ ರಾಜೀನಾಮೆ ಕೊಡಲಿ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗೋವಿಂದರಾಜ್ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರಕ್ಕೆ ಅಷ್ಟಾದ್ರೂ ಜ್ಞಾನೋದಯವಾಗಿದ್ದಕ್ಕೆ ಅಭಿನಂದನೆಗಳು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.
ನಗರದಲ್ಲಿ (Bengaluru) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಗೋವಿಂದರಾಜ್‍ರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇದೇ ವೇಳೆ, ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಅಂತ ಐವರನ್ನು ತರಾತುರಿಯಲ್ಲಿ ಅಮಾನತು ಮಾಡಿದ್ದು ಸರಿಯಲ್ಲ. ಅಮಾನತು ಅವಶ್ಯಕತೆ ಇರಲಿಲ್ಲ. ಸರ್ಕಾರ ಈ ರೀತಿ ತೀರ್ಮಾನ ಮಾಡಿದ್ರೆ ಅಧಿಕಾರಿಗಳು ಕೆಲಸ ಮಾಡೋಕೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಕಾಲ್ತುಳಿತದಲ್ಲಿ 11 ಜನ ಸಾವು ಪ್ರಕರಣ – ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು
ಸರ್ಕಾರದ ತಪ್ಪುಗಳನ್ನ ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡೋದು ಸರಿಯಲ್ಲ. ಹೀಗೆ ಮಾಡಿದ್ರೆ ಅವರು ಹೇಗೆ ಶ್ರದ್ಧೆಯಿಂದ ಕೆಲಸ ಮಾಡೋಕೆ ಸಾಧ್ಯ? ಸರ್ಕಾರ ಇದನ್ನ ಯೋಚನೆ ಮಾಡಬೇಕಿತ್ತು. ಚಿನ್ನಸ್ವಾಮಿ ಪ್ರಕರಣದಲ್ಲಿ ನಡೆದಿರೋ ವಾಸ್ತವಾಂಶಗಳೇ ಬೇರೆ ಇದೆ. ಸರ್ಕಾರ ಪಾರದರ್ಶಕವಾಗಿ ಆಡಳಿತ ಕೊಡ್ತೀವಿ. ಸತ್ಯ ನಿಷ್ಠೆಯಿಂದ ಆಡಳಿತ ಮಾಡ್ತೀವಿ ಅಂತಾರೆ. ಇಂತಹ ಸನ್ನಿವೇಶದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನಕ್ಕೆ ಜನಾಭಿಪ್ರಾಯ ಏನು ಅಂತ ಈಗ ಗೊತ್ತಾಗ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡ್ತಿದೆ ಎಂಬ ಸಿಎಂ, ಡಿಸಿಎಂ ಹೇಳಿಕೆ ವಿಚಾರವಾಗಿ, ಹೆಣದ ಮೇಲೆ ರಾಜಕೀಯ ಮಾಡೋ ಅವಶ್ಯಕತೆ ನಮಗೆ ಇಲ್ಲ. ರಾಜ್‍ಕುಮಾರ್ ಘಟನೆ ಬಗ್ಗೆ ನಾನೇ ಹೇಳಿದ್ದೇನೆ. ಆ ಕೇಸಲ್ಲಿ ಅಶಾಂತಿ ವಾತಾವರಣ ಉಂಟು ಮಾಡಲು ಪ್ರಯತ್ನ ಪಟ್ಟರು, ಸೀಮೆಎಣ್ಣೆ, ಪೆಟ್ರೋಲ್ ತಂದು ಶಾಂತಿಯುತವಾಗಿ ಆಗಬೇಕಾದ ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಆಯ್ತು. ಈ ವೇಳೆ, ಗೋಲಿಬಾರ್ ಆಯ್ತು. ಅದರಲ್ಲಿ ಇಬ್ಬರು ಸತ್ತಿದ್ದಾರೆ. ಅದನ್ನು ನಾನು ಓಪನ್ ಆಗಿ ಹೇಳ್ತಿದ್ದೇನೆ. ಆ ಘಟನೆಗೂ ಇದಕ್ಕೂ ಯಾಕೆ ಹೋಲಿಕೆ ಮಾಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಸಿಬ್ಬಂದಿಯಿಂದ ಅಭಿಮಾನಿಗಳ ಮೇಲೆ ಪೈಪ್‌ನಿಂದ ಹಲ್ಲೆ – ಬಹಳ ಭಯಾನಕವಾಗಿದೆ ಕಾಲ್ತುಳಿತದ ದೃಶ್ಯ
ಮೊದಲ ಬಾರಿಗೆ ಆಗ ಅಧಿಕಾರಕ್ಕೆ ಬಂದಿದ್ದೆ. ಅಂತಹ ದೊಡ್ಡ ವ್ಯಕ್ತಿ ನಿಧನರಾಗಿದ್ದು ಅದೇ ಮೊದಲು. ಅವತ್ತು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳೋದಕ್ಕೂ ಮುನ್ನವೇ ಆಸ್ಪತ್ರೆ ಬುಲೆಟಿನ್ ಹೊರಡಿಸಿತ್ತು. ಅದಕ್ಕೆ ಹಾಗೆ ಆಯ್ತು. ಅದಕ್ಕೂ ಇದಕ್ಕೂ ಹೋಲಿಕೆ ಮಾಡಬೇಡಿ. ಇದು ಹೊಂದಾಣಿಕೆ ಆಗುವುದಿಲ್ಲ ಎಂದಿದ್ದಾರೆ.
ಕಾಲ್ತುಳಿತ ಪ್ರಕರಣದ ಸಂಪೂರ್ಣ ಜವಾಬ್ದಾರಿ ಸಿಎಂ, ಡಿಸಿಎಂ, ಗೃಹ ಸಚಿವರು ತೆಗೆದುಕೊಳ್ಳಬೇಕು. ಇದರಲ್ಲಿ 3 ಜನರದ್ದು ತಪ್ಪಿದೆ. ಏಕಾಏಕಿ 24 ಗಂಟೆ ಒಳಗೆ ಸನ್ಮಾನ ಮಾಡೋದು ಏನಿತ್ತು? ಸನ್ಮಾನವನ್ನು ಸರಿಯಾಗಿ ಮಾಡಿದ್ರಾ? ಆಟಗಾರರನ್ನ ಸರಿಯಾಗಿ ನಡೆಸಿಕೊಂಡ್ರಾ? ಬೇಕಾಬಿಟ್ಟಿ ಸನ್ಮಾನ ಮಾಡಿದ್ರಿ. ನೀವು ಕೊಟ್ಟ ಶಾಲು, ಟೋಪಿ ಎಲ್ಲಾ ಅವರು ತಗೊಂಡು ಹೋದ್ರಾ, ಬಿಸಾಕಿ ಹೋದ್ರಾ ಗೊತ್ತಿಲ್ಲ. ಇದಕ್ಕೆ ತರಾತುರಿಯಲ್ಲಿ ಕಾರ್ಯಕ್ರಮ ಬೇಕಿತ್ತಾ? ಜವಾಬ್ದಾರಿ ತಗೊಂಡೋರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು. ಸಿಎಂ, ಡಿಸಿಎಂ, ಗೃಹ ಸಚಿವರು ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Chinnaswamy Stampede – ಇಂದಿನಿಂದ ಸಿಐಡಿ ತನಿಖೆ ಆರಂಭ