ಕಾಶ್ಮೀರ್‌ ಫೈಲ್ಸ್‌ನಲ್ಲಿ ಏನಿದೆ?: ಹೆಚ್‍ಡಿಕೆ ಪ್ರಶ್ನೆ

Public TV
1 Min Read

ಬೆಂಗಳೂರು: ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾವನ್ನು ರಾಜಕೀಯ ಕಾರಣಗಳಿಗಾಗಿ ಪ್ರೊಮೋಷನ್ ಮಾಡುತ್ತಿದ್ದಾರೆ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರ್‌ ಫೈಲ್ಸ್ ಸಿನಿಮಾ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ. ಹಿಂದೆ ಗದ್ದರ್ ಎಂಬ ಸಿನಿಮಾ ಬಂದಿತ್ತು. ಅದರಲ್ಲಿ ಎರಡು ಸಮುದಾಯಗಳ ನಡುವಿನ ಪ್ರೇಮಕಥೆ ಇತ್ತು. ಎರಡು ಸಮುದಾಯಗಳನ್ನು ಬೆಸೆಯುವ ಕಥೆ ಇದಾಗಿತ್ತು. ಅದೇ ರೀತಿ ಭಜರಂಗಿ ಬಾಯಿಜಾನ್ ಅಂತಾ ಸಿನಿಮಾ ಬಂದಿತ್ತು. ಅದರಲ್ಲಿ ಕಳೆದುಹೋದ ಪಾಕಿಸ್ತಾನಿ ಮಗುವನ್ನು ಪಾಕಿಸ್ತಾನಕ್ಕೆ ಕರೆದು ಕೊಂಡು ಹೋಗಿ ಅವರ ಮನೆಗೆ ಸೇರಿಸುವ ಕಥೆ ಇತ್ತು. ಆದರೆ ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ಏನಿದೆ.? ಇದರಲ್ಲಿ ಬರೀ ಬೆಂಕಿ ಹಚ್ಚುವ ಕೆಲಸವಷ್ಟೇ ಇದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡಿ, ಈಗ ಮಾತನಾಡಲೂ ಯೋಚಿಸಬೇಕಾದ ಪರಿಸ್ಥಿತಿ ಇದೆ. ನಾವು ಮಾತನಾಡಿದರೆ ಕೆಟ್ಟವರಾಗುತ್ತೇವೆ. ಹಿಜಬ್ ವಿಚಾರ, ಭಗವದ್ಗೀತೆಯ ವಿಚಾರ ಬಂದಾಗ ಸಿದ್ದರಾಮಯ್ಯ ಅವರೇ ಸುಮ್ಮನಾಗಿ ಬಿಡ್ತಾರೆ. ಶಿವಮೊಗ್ಗ ಮಾರಿಕಾಂಬಾ ಜಾತ್ರೆಯಲ್ಲಿ ಒಂದು ವರ್ಗದ ಜನಕ್ಕೆ ಅಂಗಡಿಮುಂಗಟ್ಟು ಹಾಕಲು ಅವಕಾಶ ಕೊಟ್ಟಿಲ್ಲ. ಇದೆಲ್ಲಾ ನೋಡಿದರೆ ಸಮಾಜ ಎಲ್ಲಿ ಸಾಗುತ್ತಿದೆ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಾತ್ರೆ ಉತ್ಸವ ನಂಬಿರುವ ನಮಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ: ಆರಿಫ್

ಜನ ಮತ ಕೊಡದೇ ಇದ್ದರೂ ಪರವಾಗಿಲ್ಲ, ನಾನಂತೂ ಮಾತನಾಡುತ್ತೇನೆ. ನನಗೇನೂ ಮತ ಬೇಕಿಲ್ಲ, ಎರಡು ಬಾರಿ ಸಿಎಂ ಆಗಿದ್ದೇನೆ. 37 ಶಾಸಕರು ಗೆದ್ದಾಗ ಸಿಎಂ ಆಗಿದ್ದೆ. ಆರು ಕೋಟಿ ಜನ ಮತ ಕೊಟ್ಟು ಸಿಎಂ ಆಗಿದ್ದೆನಾ ಎಂದರು. ಇದನ್ನೂ ಓದಿ: ಬೀದಿ ನಾಯಿಗೆ ಊಟ ನೀಡಲು ಬಂದವನಿಗೆ ನರಕದ ಹಾದಿ ತೋರಿಸಿದ

Share This Article
Leave a Comment

Leave a Reply

Your email address will not be published. Required fields are marked *