ನಮ್ಮ ಪಕ್ಷದ ಗಾಡಿ ಫುಲ್ ಇದೆ: ಸತೀಶ್‌ ಜಾರಕಿಹೊಳಿ

Public TV
1 Min Read

ಬೆಂಗಳೂರು: 4 ದಿನಗಳ ದೆಹಲಿ ಪ್ರವಾಸ ಮುಗಿಸಿರುವ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಹೆಚ್‌ಡಿ ಕುಮಾರಸ್ವಾಮಿ (HD Kumarawamy) ಭೇಟಿಯಿಂದ ಉದ್ಭವವಾಗಿ ನಾನಾ ಪ್ರಶ್ನೆಗಳಿಗೆ ಉತ್ತರ ನೀಡಿ ಮುಖ್ಯಮಂತ್ರಿಯಾಗಲು ಜೆಡಿಎಸ್ (JDS) ಬೆಂಬಲ ಕೋರಲು ಹೋಗಿದ್ದರು ಎಂಬ ಜಿಟಿ ದೇವೇಗೌಡ ಆರೋಪವನ್ನು ತಳ್ಳಿ ಹಾಕಿದ್ದಾರೆ. ಭೂತಯ್ಯನ ಮಗ ಅಯ್ಯು ಚಿತ್ರದ ಸನ್ನಿವೇಶವೊಂದನ್ನು ವಿವರಿಸಿ ನಾನು ಹಾಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಐ ಲವ್ ಯು ನಂದಿನಿ ಅಂತಿದ್ರು, ಈಗ ಐ ಹೇಟ್ ಯು ನಂದಿನಿ ಅಂತಾ ಜಾಹೀರಾತು ಕೊಡಬೇಕು: ಅಶೋಕ್ ವಂಗ್ಯ

 

ನಮ್ಮ ಪಕ್ಷದ ಗಾಡಿ ಫುಲ್ ಇದೆ. ಜೆಡಿಎಸ್‌ನ 14 ಶಾಸಕರನ್ನು ತಗೆದುಕೊಂಡು ಏನು ಮಾಡೋಣ ಎಂದು ಕೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಾವು ವೇಟಿಂಗ್‌ ಲಿಸ್ಟ್‌ನಲ್ಲಿದ್ದೇವೆ. ಅಲ್ಲಿಯೇ ಕಾಯ್ತೇವೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿಯ ಕಪಿಮುಷ್ಟಿಯಲ್ಲಿದೆ: ಹೆಚ್‌ಡಿಕೆ

ದೇವೇಗೌಡರ ಭೇಟಿ ಆಕಸ್ಮಿಕ ಎಂದಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಸಚಿವ ಎಂಬಿ ಪಾಟೀಲ್ ಭೇಟಿ ನೀಡಿ ಮಾತುಕತೆ ನಡೆಸಿದರು.

Share This Article