-ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ: ಹೆಚ್‌ಡಿಕೆ
ನವದೆಹಲಿ: ಲೋಹ ಹಾಗೂ ಉಕ್ಕು ಕ್ಷೇತ್ರದಲ್ಲಿ ನಾವೀನ್ಯತೆ ಹಾಗೂ ಮರು ಬಳಕೆಯನ್ನು ಉತ್ತೇಜಿಸಿ ಗ್ರೀನ್ ಸ್ಟೀಲ್ ತಯಾರಿಕೆಗೆ ಒತ್ತು ನೀಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
ನವದೆಹಲಿಯ ನವರೋಜಿ ನಗರದಲ್ಲಿ ಬುಧವಾರ ಎಂಎಸ್‌ಟಿಸಿ (ಮೆಟಲ್ ಸ್ಕ್ರ‍್ಯಾಪ್ ಟ್ರೇಡ್ ಕಾರ್ಪೋರೆಷನ್ ಲಿಮಿಟೆಡ್) ನೂತನ ಕಾರ್ಪೊರೇಟ್ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಶಾಪಿಂಗ್‌ಗೆ ವಿಚಾರಕ್ಕೆ ಗಲಾಟೆ; ಪತ್ನಿ ಕುತ್ತಿಗೆಗೆ ತುಳಿದು ಕೊಲೆ – ಮಗಳ ಸನ್ನೆಯಿಂದ ಆರೋಪಿ ಲಾಕ್!
ಲೋಹ ವಲಯದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯ ಮಟ್ಟಕ್ಕೆ ತರಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದೇಶವಾಗಿದ್ದು, ಆ ನಿಟ್ಟಿನಲ್ಲಿ ನಾವು ವೇಗಗತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮೆಟಲ್ ಸ್ಕ್ರ‍್ಯಾಪ್ ಅನ್ನು ಪರಿಣಾಮಕಾರಿಯಾಗಿ ವಿಲೇವಾರಿ ಹಾಗೂ ಮರುಬಳಕೆ ಮಾಡುವ ನಿಟ್ಟಿನಲ್ಲಿ ಮುತುವರ್ಜಿಯಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು. ಇದನ್ನೂ ಓದಿ: ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಣ್ಣ; ಹೆಚ್‌ಡಿಕೆ ಮತ್ತೆ ಸಿಎಂ ಆಗಲಿ ಎಂದ ನಿಖಿಲ್
1964ರಲ್ಲಿ ಲೋಹ ತ್ಯಾಜ್ಯ ವ್ಯಾಪಾರ ಸಂಸ್ಥೆಯಾಗಿ ಸ್ಥಾಪನೆಯಾದ ಎಂಎಸ್‌ಟಿಸಿ ಕೇಂದ್ರ ಸರ್ಕಾರಿ ಸ್ವಾಮ್ಯದ ಮಿನಿರತ್ನ ಕಂಪನಿಯಾಗಿದೆ. ದೇಶದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಹರಾಜು ವೇದಿಕೆಗಳಲ್ಲಿ ಒಂದಾಗಿದ್ದು, ಐಎಸ್‌ಒ-ಪ್ರಮಾಣೀಕೃತ ಮೂಲಸೌಕರ್ಯ ಹೊಂದಿದೆ ಎಂದು ಸಚಿವರು ಕಂಪನಿಯ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಖಾಲಿ ಮಾತು ಬೇಡ, ಮೊದಲು ದುಡ್ಡು ಕೊಡಿಸಲಿ: ಕುಮಾರಸ್ವಾಮಿಯನ್ನು ಛೇಡಿಸಿದ ಡಿಕೆಶಿ
ಕಂಪನಿಯು 4 ಲಕ್ಷಕ್ಕೂ ಹೆಚ್ಚು ಹರಾಜುಗಳನ್ನು ಪೂರ್ಣಗೊಳಿಸಿದ್ದು, ಎಂಎಸ್‌ಟಿಸಿ ಸಾರ್ವಜನಿಕ ಆಸ್ತಿ ಹಣಗಳಿಕೆ, ಸ್ಪೆಕ್ಟ್ರಮ್ ಮಾರಾಟ ಮತ್ತು ಕಲ್ಲಿದ್ದಲು ಬ್ಲಾಕ್ ಹರಾಜಿನಲ್ಲಿ ಪ್ರಮುಖ ಕಂಪನಿಯಾಗಿ ಕೆಲಸ ಮಾಡುತ್ತಿದೆ. ಈ ಕಂಪನಿ ಬೆಳವಣಿಗೆ ಹಾಗೂ ಪರಿವರ್ತನಾತ್ಮಕ ರೂಪಾಂತರವು ಪ್ರಧಾನಿ ನರೇಂದ್ರ ಮೋದಿ ಅವರ ವಿಶಾಲ ಅಭಿವೃದ್ಧಿಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಅವರ ನಾಯಕತ್ವವು ಸಾರ್ವಜನಿಕ ಸೇವಾ ವಿತರಣೆಯಲ್ಲಿ ತಂತ್ರಜ್ಞಾನ, ಪಾರದರ್ಶಕತೆ ಮತ್ತು ದಕ್ಷತೆಗೆ ಒತ್ತು ನೀಡಿದೆ. ಡಿಜಿಟಲ್ ಸಕ್ರಿಯಗೊಳಿಸುವವನಾಗಿ ಎಂಎಸ್‌ಟಿಸಿಯ ಪಾತ್ರವು ವಲಯಗಳಲ್ಲಿ ಹೊಣೆಗಾರಿಕೆ ಮತ್ತು ಒಳಗೊಳ್ಳುವಿಕೆಯನ್ನು ನೀಡುವ ಈ ಆಡಳಿತ ಮಾದರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು. ಇದನ್ನೂ ಓದಿ: ಶಾಲೆಯಲ್ಲಿ ಪಾಠ ಕೇಳುವಾಗಲೇ ಹೃದಯಾಘಾತ – 4ನೇ ತರಗತಿ ವಿದ್ಯಾರ್ಥಿ ಸಾವು
ಉಕ್ಕು ಸಚಿವಾಲಯದ ಕಾರ್ಯದರ್ಶಿ ಸಂದೀಪ್ ಪೌಂಡ್ರಿಕ್, ಎಂಎಸ್‌ಟಿಸಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಾನವೇಂದ್ರ ಗೋಶಾಲ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ಅನುದಾನಕ್ಕಾಗಿ ಮನವಿ: ಡಿಸಿಎಂ ಡಿಕೆಶಿ