‘ಕೈ’ ನಾಯಕರ ಪ್ರಣಾಳಿಕೆ ಅಸ್ತ್ರಕ್ಕೆ ಹೆಚ್‌ಡಿಕೆ ಕಾವೇರಿ ಪ್ರತ್ಯಸ್ತ್ರ

Public TV
2 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೆಸರು ಘೋಷಣೆ ಆದ ದಿನದಿಂದ ಕ್ಷೇತ್ರ ರಾಜಕೀಯವಾಗಿ ರಂಗು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ (Congress) ನಾಯಕರು ಶತಾಯಗತಾಯ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ.

ಇದೀಗ ಕುಮಾರಸ್ವಾಮಿ ಅವರನ್ನು ಮಣಿಸಲೇಬೇಕೆಂದು ಕಾಂಗ್ರೆಸ್ ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಗೆ ಒಂದೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರದ ಗ್ಯಾರಂಟಿ ಪ್ರಣಾಳಿಕೆಯಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದ ವಿಧಾನಸಭಾ ಕ್ಷೇತ್ರಗಳಿಗೆ ನೀಡಿರುವ ಪ್ರಾಣಾಳಿಕೆಗಳ ಮೂಲಕ ಜನರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಇದನ್ನೂ ಓದಿ: ಸೆಕೆಂಡ್ ಹಾಫ್ ಎಲೆಕ್ಷನ್‍ಗೆ ಅಮಿತ್ ಶಾ ಎಂಟ್ರಿ- ಉತ್ತರ ಕರ್ನಾಟಕ ಕ್ಷೇತ್ರಗಳತ್ತ ಚಾಣಕ್ಯ ಫೋಕಸ್

ಇತ್ತ ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸುವ ಅಸ್ತ್ರವನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಹೂಡಿದ್ದಾರೆ. ಮಂಡ್ಯ ಜಿಲ್ಲೆಯ ಜನರ ಭಾವನಾತ್ಮಕ ವಿಚಾರವಾದ ಕಾವೇರಿ ವಿವಾದವನ್ನೇ ಹೆಚ್‌ಡಿಕೆ ಅಸ್ತ್ರ ಮಾಡಿಕೊಂಡಿದ್ದಾರೆ. ಭತ್ತ ಬೆಳೆಯುತ್ತಿದ್ದ ಮಂಡ್ಯ ರೈತರನ್ನು ಹುರುಳಿ ಬೆಳೆಯುವ ಹಾಗೆ ಕಾಂಗ್ರೆಸ್ ಸರ್ಕಾರ ಮಾಡಿದೆ. ಕಾವೇರಿ ಇತಿಹಾಸದಲ್ಲೇ ಈ ಬಾರಿ ಮಂಡ್ಯ ರೈತರನ್ನು ಬೆಳೆ ಹಾಕಬೇಡಿ ಎಂದು ಹೇಳಿರುವ ಕೃಷಿ ಸಚಿವ ಇದ್ರೆ ಅದು ಚಲುವರಾಯಸ್ವಾಮಿ ಮಾತ್ರ. ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಕನಕಪುರದ ಸಹೋದರ ಮೇಕೆದಾಟು ಯಾತ್ರೆ ಮಾಡಿದರು. ಆದರೆ ಸರ್ಕಾರ ಬಂದು 11 ತಿಂಗಳು ಆದರೂ ಸಹ ಆ ಬಗ್ಗೆ ಇನ್ನೂ ಏನೂ ಆಗಿಲ್ಲ ಎಂದರು. ಇದನ್ನೂ ಓದಿ: ಮಾಲ್ಡೀವ್ಸ್ ಚುನಾವಣೆ: ಭಾರತ ವಿರೋಧಿ ಮುಯಿಝುಗೆ ಭರ್ಜರಿ ಗೆಲುವು

ನಾನು ಬಿಜೆಪಿ ಜೊತೆ ಮೈತ್ರಿ ಆಗಿರೋದೆ ಕಾವೇರಿ ವಿವಾದವನ್ನು ಬಗೆಹರಿಸಲು. ಮೇಕೆದಾಟು ಯೋಜನೆಗೆ ಮುಂದಿನ ಐದು ವರ್ಷದಲ್ಲಿ ಶಂಕುಸ್ಥಾಪನೆ ಮಾಡಿಯೇ ಮಾಡುತ್ತೇವೆ. ಇಲ್ಲವಾದಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಕಾವೇರಿ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲಿಲ್ಲ ಅಂದರೆ ಮಂಡ್ಯ ಜನರ ಬಳಿ ಇನ್ಯಾವತ್ತು ಮತ ಕೇಳುವುದಿಲ್ಲ. ಕಾವೇರಿಗಾಗಿ ನನಗೆ ಮತ ಹಾಕಿ ಎಂದು ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದ ಜನರ ಬಳಿ ಮತಯಾಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ

v

ಒಟ್ಟಾರೆ ಕುಮಾರಸ್ವಾಮಿ ಕಾಂಗ್ರೆಸ್‌ನ ಪ್ರಣಾಳಿಕೆ ಅಸ್ತ್ರಕ್ಕೆ ಕಾವೇರಿಯ ಪ್ರತ್ಯಸ್ತ್ರ ಹೂಡಿದ್ದಾರೆ. ಇದೀಗ ಮಂಡ್ಯ ಜನರು ಯಾವ ಅಸ್ತ್ರಕ್ಕೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಒಂದೇ ಕುಟುಂಬದ 8 ಜನರಿದ್ದ ಕಾರಿಗೆ ಬೆಂಕಿ – ಹುಡುಗಿ ಸಜೀವ ದಹನ

Share This Article