ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು: ಹೆಚ್‍ಡಿಡಿ

Public TV
2 Min Read

ಹಾಸನ: ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು. ಹೆಣ್ಣುಮಕ್ಕಳಿಗೆ 33% ಮೀಸಲಾತಿ ಕೊಟ್ಟೆ. ನನ್ನ ಜೀವನದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ, ತಾತ್ವಿಕ ಹೋರಾಟ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿಳಿಸಿದ್ದಾರೆ.

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಶ್ರೀನಂಜುಂಡೇಶ್ವರ ದೇವಾಲಯ ಉದ್ಘಾಟನೆ ಹಾಗೂ ವಿಗ್ರಹ ಪ್ರತಿಷ್ಠಾನನೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ನಾನು ಕಟ್ಟಿದಂತಹ ಹೇಮಾವತಿ ಡ್ಯಾಂ, ಆ ನೀರನ್ನು ನಾನು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಈಗ ತಮಿಳುನಾಡಿನವರು ನಮ್ಮ ಜೀವ ಹಿಂಡುತ್ತಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ

ನನ್ನ ಜೀವನದಲ್ಲಿ ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ, ತಾತ್ವಿಕ ಹೋರಾಟ ಮಾಡಿದ್ದೇನೆ. ವಾಜಪೇಯಿ ನನ್ನನ್ನು ಉಳಿಸುತ್ತೀನಿ ಅಂದರು, ನಿಮ್ಮ ಸಹಾಯ ನನಗೆ ಬೇಡ ಅಂದೆ. ಹೆಣ್ಣುಮಕ್ಕಳೇ ನಾನು ಪ್ರಧಾನಮಂತ್ರಿಯಾಗಲು ಶಕ್ತಿ ಕೊಟ್ಟಿದ್ದು. ಹೆಣ್ಣುಮಕ್ಕಳಿಗೆ 33% ಮೀಸಲಾತಿ ಕೊಟ್ಟೆ. ದೈವದ ಆಟ ನೋಡಿ, ಒಬ್ಬ ರಾಮನಗರ ಜಿಲ್ಲೆ, ಇನ್ನೊಬ್ಬ ಹಾಸನ ಜಿಲ್ಲೆ. ದೇವರ ದಯೆ ಕುಮಾರಸ್ವಾಮಿಯನ್ನು ರಾಮನಗರಕ್ಕೆ ಎಳೆದುಕೊಂಡು ಹೋಗಿದೆ, ಇದು ಭಗವಂತನ ಲೀಲೆ, ನಮ್ಮ ಕೈಯಲ್ಲಿ ಇಲ್ಲ. ಕುಮಾರಸ್ವಾಮಿ ನಿರ್ಮಾಪಕನಾಗಿ ಸಿನಿಮಾ ತೆಗೆಯುತ್ತಿದ್ದ. ವಿಧಿ ಸೋತು, ಗೆದ್ದು ಮುಖ್ಯಮಂತ್ರಿಯಾದ. ನಾನು ಸೋತಿರಬಹುದು, ಗೆದ್ದಿರಬಹುದು. ಎಲ್ಲಾ ಸಮಾಜಗಳು ಈ ಕ್ಷೇತ್ರದಲ್ಲಿ ನನ್ನನ್ನು ಉಳಿಸಿಕೊಂಡಿರುವುದು, ಒಂದೊಮ್ಮೆ ಏರಪೇರು ಆಹಬಹುದು. ಈ ಕ್ಷೇತ್ರವನ್ನು ನಾನು ಎಂದು ಮರೆಯುವುದಿಲ್ಲ ಎಂದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಅನೇಕ ಸುಳ್ಳುಗಳನ್ನು ಬಿಂಬಿಸಲಾಗಿದೆ: ಒಮರ್ ಅಬ್ದುಲ್ಲಾ

ಸುತ್ತೂರಿನಲ್ಲಿ ದೊಡ್ಡ ವಿದ್ಯಾ ಸಂಸ್ಥೆಗಳನ್ನು ಕಟ್ಟಿದೆ. ನಮಗೂ ಸುತ್ತೂರು ಮಠಕ್ಕು ನಿಕಟವಾದ ಸಂಬಂಧವಿದೆ. ಈ ಜಿಲ್ಲೆಯಲ್ಲಿ ನಾನು ಕಟ್ಟಿದಂತಹ ಹೇಮಾವತಿ ಡ್ಯಾಂ, ಆ ನೀರನ್ನು ನಾನು ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ. ಈಗ ತಮಿಳುನಾಡಿನವರು ನಮ್ಮ ಜೀವ ಹಿಂಡುತ್ತಾರೆ. ಕಾಂಗ್ರೆಸ್ ಮುಖಂಡರು ಎಲ್ಲಾ ಕಡೆ ಸುತ್ತಿಕೊಂಡು ಬಂದರು ಏನಾಯ್ತು. ಈ ವಿಷಯವನ್ನು ಲಾಸ್ಟ್ ವೀಕ್ ನಾನು ಪಾರ್ಲಿಮೆಂಟ್‍ನಲ್ಲಿ ರೈಸ್ ಮಾಡ್ಬೇಕು ಅನ್ಕೊಂಡೆ ಒಂದು ವಿಷಯ ತೆಗೆಯಲು ಬಿಡಲಿಲ್ಲ. ನಾನು ಮಾತನಾಡಲು ಅವಕಾಶ ಕೊಟ್ಟರು ಇವರೆಲ್ಲಾ ಎದ್ದು ಹೋದರು. ನಮ್ಮಲ್ಲಿ ಮೂರು ಪಾರ್ಟಿ, ಮೂರು ಗುಂಪು. ನನ್ನ ಕೈಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *