ಮೈಸೂರು ದಸರಾ | ಸಿಎಂ ಜೊತೆ ತೆರೆದ ಜೀಪಿನಲ್ಲಿ ಮಹದೇವಪ್ಪ ಮೊಮ್ಮೊಗನ ಪ್ರಯಾಣ

Public TV
1 Min Read

– ಇದು ನಾಡಹಬ್ಬ ಅಲ್ಲ, ರಾಜಕೀಯ ಹಬ್ಬ ಎಂದು ಟೀಕೆ

ಮೈಸೂರು: ದಸರಾ ಮೆರವಣಿಗೆಯ (Mysuru Dasara) ಆರಂಭದ ವೇಳೆ ತೆರೆದ ಜೀಪಿನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಸಚಿವರ ಜೊತೆ ಸಚಿವ ಮಹದೇವಪ್ಪ (H.C Mahadevappa) ಅವರ ಮೊಮ್ಮಗ ಪ್ರಯಾಣಿಸಿದ್ದು ಭಾರೀ ಟೀಕೆ ವ್ಯಕ್ತವಾಗಿದೆ.

ನಂದಿ ಧ್ವಜ ಪೂಜೆಯನ್ನು ಅರಮನೆ ಹೊರ ಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಮುಗಿಸಿ, ಅರಮನೆಯ ಆವರಣಕ್ಕೆ ಗಣ್ಯರು ತೆರೆದ ಜೀಪಿನಲ್ಲಿ ಸಿಎಂ, ಡಿಸಿಎಂ ಆಗಮಿಸಿದ್ದರು. ಇದನ್ನೂ ಓದಿ: ಡಿಸೆಂಬರ್‌ನಲ್ಲಿ ಹೊಸ ಮನೆ ಗೃಹ ಪ್ರವೇಶ – ಯಾರಿಗೂ ಆಹ್ವಾನ ನೀಡಲ್ಲ ಎಂದ ಸಿದ್ದರಾಮಯ್ಯ!

ಸಿಎಂ ಹಾಗೂ ಡಿಸಿಎಂ ಅಲ್ಲಿ ನೆರೆದಿದ್ದ ಜನರಿಗೆ ಶುಭಾಶಯ ತಿಳಿಸುವ ಸಲುವಾಗಿ ತೆರೆದ ಜೀಪಿನಿಂದ ಕೈ ಬೀಸಿದ್ದರು. ಈ ಜೀಪಿನಲ್ಲಿ ಮಹದೇವಪ್ಪ ಅವರ ಜೊತೆ ಮೊಮ್ಮಗನೂ ಪ್ರಯಾಣಿಸಿದ್ದ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಜನರು 6 ಸಾವಿರ ರೂ. ನೀಡಿ ಗೋಲ್ಡನ್‌ ಪಾಸ್‌ ಪಡೆದರೂ ಒಳಗಡೆ ಬಿಡಲಿಲ್ಲ. ಆದರೆ ಮಂತ್ರಿಗಳ ಮೊಮ್ಮಕ್ಕಳು ಜೀಪಿನಲ್ಲಿ ತೆರಳುತ್ತಾರೆ. ಇದು ನಾಡಹಬ್ಬ ಅಲ್ಲ, ಇದು ರಾಜಕೀಯ ಹಬ್ಬ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕೇಂದ್ರಕ್ಕೂ ಮೊದಲೇ ರಾಜ್ಯ ಚುನಾವಣಾ ಆಯೋಗದಿಂದ SIR

Share This Article