ಬೆಂಗಳೂರು: ಕಾನೂನು, ಕಾಯ್ದೆ ಪ್ರಕಾರವೇ ಎಸ್‌ಸಿಎಸ್‌ಪಿ-ಟಿಎಸ್‌ಪಿ (SCSP-TSP) ಹಣವನ್ನ ಗ್ಯಾರಂಟಿ ಯೋಜನೆ ಗಳಿಗೆ ಬಳಕೆ ಮಾಡಿಕೊಳ್ಳಲಾಗ್ತಿದೆ ಎಂದು ಸಚಿವ ಮಹದೇವಪ್ಪ (Mahadevappa) ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಗ್ಯಾರಂಟಿಗೆ ಬಳಕೆಯ ಬಗ್ಗೆ ಬಿಜೆಪಿಯಿಂದ (BJP) ವಿರೋಧದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಮೊದಲ ದಿನದಿಂದ ಸದನದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ರಾಜ್ಯದಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಇದೆ. ಇದರ ಅನ್ವಯ ಖರ್ಚು ಮಾಡಲಾಗ್ತಿದೆ. ಬಿಜೆಪಿ ಅವರು ಈ ಕಾಯ್ದೆ ಬಳಸಿಕೊಂಡು 7ಡಿ ಅಡಿ 10 ಸಾವಿರ ಕೋಟಿ ರೂ. ಡೀಮ್ಡ್ ಎಕ್ಸೆಪೆಂಡೇಚರ್ ಅಂತ ಖರ್ಚು ಮಾಡಿದ್ರು. ಕಾರ್ಪೋರೇಷನ್‌ನಲ್ಲೂ ಖರ್ಚು ಮಾಡಿದ್ರು. ಅವರ ಮೇಲೆ ಕೇಸ್ ಹಾಕಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: Operation MAHADEV | ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ
ನಾವು ಬಂದ ಮೇಲೆ ಬಿಜೆಪಿ ಖರ್ಚು ಮಾಡಿದ್ದ 7ಡಿ ತೆಗೆದು ಹಾಕಿ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಹಣ ತೆಗೆದು ಇಡುತ್ತಿದ್ದೇವೆ. ಆ ಜನಾಂಗದ ಕಲ್ಯಾಣಕ್ಕೆ ಆ ಹಣ ಬಳಕೆ ಮಾಡ್ತಿದ್ದೇವೆ. 7ಡಿ ಬಳಸಿಕೊಂಡು ಎಸ್‌ಸಿ, ಎಸ್‌ಟಿ ಜನಾಂಗಕ್ಕೆ, ಗ್ಯಾರಂಟಿಗೆ ಹಣ ಖರ್ಚು ಮಾಡ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ನೇತ್ರಾವತಿ ತಟದಲ್ಲಿ ಎಸ್‌ಐಟಿಯಿಂದ ಸ್ಥಳ ಮಹಜರು
ಹಣ ಬಳಕೆಗೆ ಕಾನೂನು ಕ್ಲಿಯರ್ ಆಗಿದೆ. ಬಿಜೆಪಿ ಪದೇ ಪದೇ ರಾಜಕೀಯ ಮಾಡ್ತಿದೆ. ಅವರಿಗೆ ಬದ್ಧತೆ ಇಲ್ಲ. ಅಷ್ಟು ಬದ್ಧತೆ ಇದ್ದರೆ ಕೇಂದ್ರ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಕೇಂದ್ರದಲ್ಲಿ ಜಾರಿ ಮಾಡಲಿ. ಬಿಜೆಪಿ ಅವರು ದಲಿತರ ಹಣವನ್ನೇ ಬಳಕೆ ಮಾಡಿದ್ರು. ಅವರಿಗೆ ಬದ್ಧತೆ ಇದ್ಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
ಗ್ಯಾರಂಟಿಯಲ್ಲಿ ನಾವು ಎಸ್‌ಸಿ, ಎಸ್ಟಿ ಫಲಾನುಭವಿಗಳಿಗೆ ಖರ್ಚು ಮಾಡ್ತಿದ್ದೇವೆ. ಡೇಟಾ ತಗೊಂಡು ಹಣ ಕೊಡ್ತಿದ್ದೇವೆ. ಸಿಎಂ ಕೂಡಾ ಡೋರ್ ಡೋರ್ ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ. ಡೇಟಾ ಕೊಡಬೇಕು ಅಂತ ನಾನು ಗ್ಯಾರಂಟಿ ಅವರಿಗೆ ಹೇಳಿದ್ದೇನೆ. ರಾಜಕೀಯ, ವೋಟ್‌ಗೆ ಗ್ಯಾರಂಟಿ ಮಾಡಿಲ್ಲ. ಜನರ ಅಭಿವೃದ್ಧಿಗೆ ಮಾಡಿರೋದು ಎಂದು ಹೇಳಿದ್ದಾರೆ.
ಸಿಎಸ್ ಅವರಿಗೆ ಡೇಟಾ ಕೊಡಬೇಕೆಂದು ಅವರಿಗೆ ಜವಾಬ್ದಾರಿ ಕೊಡಲಾಗಿದೆ. ಈಗಾಗಲೇ ಎಲ್ಲವೂ ಹೇಳಿದ್ದೇನೆ. ಹೋಗಿ ಬಂದು ಮೂಗು ಹಿಡಿದುಕೊಂಡ ಹಾಗೇ ಆಯ್ತು ಬಿಜೆಪಿ ಅವರ ಮಾತು. ಬಿಜೆಪಿ ಅವರಿಗೆ ಸಾಮಾನ್ಯ ಜ್ಞಾನ ಇರಬೇಕು ಅಲ್ವಾ. ಕಾಂಗ್ರೆಸ್, ನಾನು ಹಾಗೂ ಸಿದ್ದರಾಮಯ್ಯ ಸೇರಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆ ಮಾಡಿದ್ದು. ಮೊದಲು ಬಿಜೆಪಿಯವರು ರಾಜಕೀಯ ಮಾಡೋದು ಬಿಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.