ಕುಣಿಗಲ್, ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂಗೆ ಕಮಿಟ್ಮೆಂಟ್‌ ಇದೆ: ಹೆಚ್.ಸಿ.ಬಾಲಕೃಷ್ಣ

Public TV
2 Min Read

– ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕನ್ನು ಕೇಳ್ತಿದ್ದೇವೆ ಎಂದ ಶಾಸಕ
– ಹೇಮಾವತಿ ಕೆನಾಲ್‌ ಯೋಜನೆ ರೈತರಿಗೆ ಮರಣ ಶಾಸನ; ಸುರೇಶ್‌ ಗೌಡ ಕೆಂಡ

ರಾಮನಗರ: ಕುಣಿಗಲ್ ಮತ್ತು ಮಾಗಡಿಗೆ ನೀರು ತರಬೇಕು ಅಂತ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಗೆ ಕಮಿಟ್‌ಮೆಂಟ್‌ ಇದೆ. ಆದರೆ ನೀರನ್ನ ರಾಮನಗರ, ಕನಕಪುರಕ್ಕೆ ತೆಗೆದುಕೊಂಡು ಹೋಗ್ತಾರೆ ಅಂತ ಅಪಪ್ರಚಾರ ಆಗ್ತಿದೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ (HC Balakrishna) ಅಸಮಾಧಾನ ಹೊರಹಾಕಿದ್ದಾರೆ.

ರಾಮನಗರದಲ್ಲಿ (Ramanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಲಿಂಕ್‌ (Hemavathi Express Canal Link) ಯೋಜನೆಗೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದರು. ನಮಗೆ ಅಲೋಕೇಷನ್ ಆಗಿರೋ 0.6 ಟಿಎಂಸಿ ನೀರನ್ನ ಮಾತ್ರ ನಾವು ಕೇಳ್ತಿದ್ದೇವೆ. ಅದನ್ನ ತರಲು ಲಿಂಕ್ ಕೆನಾಲ್ ಯೋಜನೆ ಮಾಡಲಾಗ್ತಿದೆ. ಇದರ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಡಿಕೆಶಿ ಇದನ್ನ ಮಂಜೂರು ಮಾಡಿಸಿದ್ರು. ಬಳಿಕ ಸಮ್ಮಿಶ್ರ ಸರ್ಕಾರ ಬಂದಾಗ ಬಿಜೆಪಿಯವ್ರು ವಜಾ ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಮಂಜೂರಾತಿ ಪಡೆದು ಕೆಲಸ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: 

ಹೋರಾಟ ಮಾಡೋದ್ರಿಂದ ಪ್ರಯೋಜನ ಇಲ್ಲ
ರಾಜಕೀಯವಾಗಿ ಮಾತ್ರ ಇದನ್ನ ವಿರೋಧ ಮಾಡ್ತಿದ್ದಾರೆ. ಪರಮೇಶ್ವರ್, ಡಿಕೆಶಿ ನೇತೃತ್ವದಲ್ಲಿ ಯೋಜನೆ ಮಾಡ್ತಿದ್ದಾರೆ. ಪ್ರತಿಭಟನೆ ಮಾಡೋದು ಅವರ ಹಕ್ಕು ಆದರೆ ನಾವೆಲ್ಲ ಅಣ್ಣತಮ್ಮಂದಿರು. ತುಮಕೂರಿನ ಹಾಲು ಬೆಂಗಳೂರು, ಕುದೂರು ಭಾಗದಲ್ಲಿ ಮಾರಾಟ ಆಗುತ್ತೆ. ಅದನ್ನ ಮಾರಾಟ ಮಾಡಬೇಡಿ ಅಂತ ನಾವು ನಿಲ್ಲಿಸಲು ಆಗುತ್ತಾ? ಅದನ್ನ ನಿಲ್ಲಿಸಿದ್ರೆ ಆ ಭಾಗದ ರೈತರಿಗೆ ತೊಂದರೆ ಆಗಲ್ವಾ.? ನಾವೇನು ಅವರ ಹಕ್ಕನ್ನ ಕಿತ್ತುಕೊಳ್ತಿಲ್ಲ, ನಮ್ಮ ನೀರಿನ ಹಕ್ಕು ಕೇಳ್ತಿದ್ದೇವೆ. ಹೋರಾಟ ಮಾಡೋದ್ರಿಂದ ಏನು ಪ್ರಯೋಜನ ಇಲ್ಲ ಎಂದರು. ಇದನ್ನೂ ಓದಿ: ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್‌ ಕಿಚ್ಚು – ಗುಬ್ಬಿಯಲ್ಲಿ ಪೊಲೀಸ್‌ ಸರ್ಪಗಾವಲು, ರಾಮನಗರಕ್ಕೆ ನೀರು ಹರಿಸಲು ರೈತರ ವಿರೋಧ

ಮುಂದುವರಿದು ನಿಮ್ಮೂರಿನ ಹೆಣ್ಣುಮಕ್ಕಳನ್ನ ನಮ್ಮ ತಾಲೂಕಿಗೆ ಮದುವೆ ಮಾಡಿಕೊಟ್ಟಿದ್ದೀರಿ. ನಿಮ್ಮ ಹೆಣ್ಣುಮಕ್ಕಳ ಬದುಕು ಹಸನಾಗಬೇಕು. ಹಾಗಾಗಿ ಹೋರಾಟಗಾರರು ಯೋಜನೆಗೆ ಸಹಕಾರ ಕೊಡಿ ಅಂತ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬಿಎಂಟಿಸಿಯ `ದಿವ್ಯ ದರ್ಶನ’ ವಿಶೇಷ ಟೂರ್ ಪ್ಯಾಕೇಜ್ ಆರಂಭ

ಕೂಡಲೇ ಯೋಜನೆ ರದ್ದು ಮಾಡಬೇಕು: ಸುರೇಶ್‌ಗೌಡ
ಇನ್ನೂ ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ, ಸರ್ಕಾರ ನಿಷೇದಾಜ್ಞೆ ಜಾರಿ ಮಾಡಿದೆ. ಯಾವಾಗ ಸರ್ಕಾರ ರೈತ ವಿರೋಧಿ ನೀತಿ ಮಾಡುತ್ತೋ ಆಗ ರೈತರು ಹೋರಾಟ ಮಾಡ್ತಾರೆ. ಸರ್ಕಾರ ರೈತರ ನಿರ್ಣಯ ಕೇಳಿ ನಿರ್ಧಾರ ಮಾಡಬೇಕು. ಈಗ ಏಕಾಏಕಿ 10 ತಾಲೂಕುಗಳಿಗೆ ನೀರನ್ನ ಕಡಿತ ಮಾಡಿ ಒಂದೇ ಒಂದು ರಾಮನಗರ ಜಿಲ್ಲೆಗೆ ತೆಗೆದುಕೊಂದು ಹೋಗುತ್ತಿರುವುದಕ್ಕೆ ನಮ್ಮ ವಿರೋಧ ಇದೆ. 2 ವರ್ಷದಿಂದ ಡಿಸಿ ಕಚೇರಿ ಎದುರು ಧರಣಿ ಮಾಡ್ತಿದ್ದೀವಿ. ಪಾದಯಾತ್ರೆ ಮಾಡಿದ್ವಿ, ಪರಮೇಶ್ವರ್ ಮನೆ ಎದುರು ಹೋರಾಟ ಮಾಡಿ ಆಯ್ತು. ಅಧಿವೇಶನದಲ್ಲಿ ಗಲಾಟೆ ಮಾಡಿದೆವು. ಆದ್ರೆ ಸರ್ಕಾರ ಸವಾಲಾಗಿ ತೆಗೆದುಕೊಂಡು ಹೋಗುತ್ತಿದ್ದ, ರೈತರ ಬೀದಿಗೆ ಬಂದಿದ್ದೀವಿ. ಇದು ರೈತರಿಗೆ ಮರಣ ಶಾಸನ, ಕೂಡಲೇ ಈ ಯೋಜನೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು – ವಿಜಯಪುರ ರೈಲು ಪ್ರಯಾಣ; ಸೋಮಣ್ಣ ಜೊತೆ ಎಂಬಿಪಿ ಮಾತುಕತೆ

Share This Article