ಐಸ್‌ಕ್ರೀಂ ಮಾರುತ್ತಲೇ ಹಸ್ತಮೈಥುನ‌ ಮಾಡಿಕೊಂಡು ಸಿಕ್ಕಿಬಿದ್ದ!

Public TV
1 Min Read

ಹೈದರಾಬಾದ್:‌ ವ್ಯಾಪಾರಿಯೊಬ್ಬ ಐಸ್‌ಕ್ರೀಂ ಮಾರುತ್ತಲೇ ಹಸ್ತಮೈಥುನ‌ ಮಾಡಿಕೊಂಡು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಈ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದ್ದು, ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ವಾರಂಗಲ್ ಜಿಲ್ಲೆಯ ನೆಕ್ಕೊಂಡದಲ್ಲಿ ರಾಜಸ್ಥಾನ ಮೂಲದ ಕಲುರಾಮ್ ಕುರ್ಬಿಯಾ, ತಳ್ಳುವ ಗಾಡಿಯಲ್ಲಿ ಐಸ್‌ಕ್ರೀಂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದನು.

ಒಂದು ದಿನ ಕುರ್ಬಿಯಾ ಐಸ್‌ಕ್ರೀಂ ಮಾರಾಟ ಮಾಡಲು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದಾಗ ಹಸ್ತಮೈಥುನ ಮಾಡಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ತಮ್ಮ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಕೂಡಲೇ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಇತ್ತ ವೈರಲ್‌ ಆದ ವೀಡಿಯೋ ನೋಡಿ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಆಹಾರ ನಿರೀಕ್ಷಕರು ಮಾದರಿಗಳನ್ನು ಸಂಗ್ರಹಿಸಿದರು. ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯಗಳಿಗಾಗಿ ಐಪಿಸಿ ಸೆಕ್ಷನ್ 294 ರ ಅಡಿಯಲ್ಲಿ ಕುರ್ಬಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.

ವೀಡಿಯೋದಲ್ಲಿ ಕಂಡುಬರುವ ಕೃತ್ಯದ ನಿಖರ ಸ್ವರೂಪವನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ. ಆದರೆ ಇದು ಅನುಚಿತ ವರ್ತನೆಯನ್ನು ಒಳಗೊಂಡಿದೆ ಎಂದು ಹೇಳಿದರು.

Share This Article