ಊರಿಗೆ ಮರಳಿದ ಯೋಧ – ಗ್ರಾಮಸ್ಥರಿಂದ ಎತ್ತಿನಗಾಡಿನಲ್ಲಿ ಮೆರವಣಿಗೆ

Public TV
1 Min Read

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಯಲವಗಿ ಗ್ರಾಮದಲ್ಲಿ ಭಾರತೀಯ ಸೇನೆಯಲ್ಲಿ ದೇಶಕಾಯೋ ಕೆಲಸ ಮಾಡಿ ನಿವೃತ್ತರಾಗಿ ಇಂದು ಗ್ರಾಮಕ್ಕೆ ಮರಳಿದ ಯೋಧರೊಬ್ಬರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿಕೊಂಡು ಮೆರವಣಿಗೆ ಮಾಡಿ ಸಂಭ್ರಮಸಿದ್ದಾರೆ.

ಗ್ರಾಮದ ಯಶವಂತ್ ಪೂಜಾರ ಅವರು 2002ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ನಂತರ ಜಮ್ಮುಕಾಶ್ಮೀರ, ಮೀರತ್, ದೆಹಲಿ, ಕೋಲ್ಕತ್ತಾ ಸೇರಿದಂತೆ ದೇಶದ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಶನಿವಾರವಷ್ಟೇ ಯೋಧ ಯಶವಂತ್ ನಿವೃತ್ತರಾಗಿ ಇವತ್ತು ತನ್ನ ಹುಟ್ಟೂರು ಯಲವಗಿ ಗ್ರಾಮಕ್ಕೆ ಆಗಮಿಸಿದ್ದಾರೆ. ಇದನ್ನು ಓದಿ: ನಿವೃತ್ತರಾಗಿ ತವರಿಗೆ ಮರಳಿದ ಯೋಧನನ್ನು ಅದ್ಧೂರಿಯಾಗಿ ಸ್ವಾಗತಿಸಿದ ಜನತೆ 

ಇವತ್ತು ಊರಿಗೆ ಮರಳುತ್ತಿದ್ದಾರೆ ಎನ್ನುವುದನ್ನು ತಿಳಿದ ಗ್ರಾಮಸ್ಥರು ಯಲವಗಿ ಗ್ರಾಮದ ರೈಲು ನಿಲ್ದಾಣದಲ್ಲಿ ಯಶವಂತ್ ಅವರನ್ನು ಸ್ವಾಗತಿಸಿದ್ದಾರೆ. ಬಳಿಕ ಎತ್ತಿನಬಂಡಿಯಲ್ಲಿ ಗ್ರಾಮದ ತುಂಬಾ ಅವರನ್ನು ಮೆರವಣಿಗೆ ಮಾಡಿದ್ದಾರೆ. ಇಡೀ ಗ್ರಾಮದ ಜನರು ಮಾಜಿ ಯೋಧ ಯಶವಂತ್ ಅವರನ್ನು ಮೆರವಣಿಗೆ ಮಾಡಿ ಹುಟ್ಟೂರಿಗೆ ಹೆಮ್ಮೆ ತಂದ ಅವರ ಕಾರ್ಯವನ್ನ ಶ್ಲಾಘಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *