ಹಾವೇರಿ: ಶಿಗ್ಗಾಂವಿಯಲ್ಲಿ (Shiggaon) ನಡೆದಿದ್ದ ಗುತ್ತಿಗೆದಾರನ (Contractor) ಹತ್ಯೆ ಪ್ರಕರಣದ ಎ1 ಆರೋಪಿ ಮನೆಗೆ ಬೆಂಕಿ ಹಾಕಿದ್ದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮನೆಗೆ ಬೆಂಕಿ ಹಾಕಿದ್ದ ಹತ್ಯೆಯಾದ ಶಿವಾನಂದ ಕುನ್ನೂರು ಕುಟುಂಬದ 6 ಜನ ಸದಸ್ಯರನ್ನು ಬಂಧಿಸಲಾಗಿದೆ. ಹತ್ಯೆಯಾದ ರಾತ್ರಿಯೇ ಪ್ರಕರಣದ ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೇ ಇದ್ದಿದ್ದರಿಂದ ಸಾವುನೋವು ಸಂಭವಿಸಿರಲಿಲ್ಲ. ಇದನ್ನೂ ಓದಿ: ಗುತ್ತಿಗೆದಾರನ ಹತ್ಯೆ ಕೇಸ್ – ಆರೋಪಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕುಟುಂಬಸ್ಥರು
ಬಂಧಿತ ಆರೋಪಿಗಳನ್ನು ಲಿಂಗರಾಜ್ ಕುನ್ನೂರು, ಧರ್ಮಣ್ಣ ಕುನ್ನೂರು, ಶ್ರೀಧರ್, ಪ್ರಕಾಶ್ ಕುನ್ನೂರು, ಶಂಕ್ರಪ್ಪ, ಪ್ರಕಾಶ್ ಎಂದು ಗುರುತಿಸಲಾಗಿದೆ. ಕಳೆದ ಜೂ.24 ರಂದು ಶಿಗ್ಗಾಂವಿಯಲ್ಲಿ ಶಿವಾನಂದ ಕುನ್ನೂರು ಹತ್ಯೆ ನಡೆದಿತ್ತು. ಸೈಟ್ ವಿಚಾರವಾಗಿ ಈ ಕೊಲೆ ನಡೆದಿತ್ತು. ಹತ್ಯೆಯಾದ ದಿನವೇ ಆರೋಪಿಗಳು ನಾಗರಾಜ್ ಮನೆಗೆ ಬೆಂಕಿ ಹಾಕಿದ್ದರು.
ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಸುಮೋಟೋ ಕೇಸ್ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಸಾಲ ವಾಪಸ್ ಕೇಳಿದ್ದಕ್ಕೆ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ ಭೂಪ!