‘ಭೂಮಂಡಲದಲ್ಲಿ ಮುತ್ತಿನಮಳೆ ಗರೀತಲೆ ಪರಾಕ್’

Public TV
1 Min Read

– ಆಡೂರು ಗ್ರಾಮದಲ್ಲಿ ಗೊರವಯ್ಯ ನುಡಿದ ದೈವವಾಣಿ

ಹಾವೇರಿ: ಹಾನಗಲ್ ತಾಲೂಕಿನ ಆಡೂರಿನ ಪ್ರಸಿದ್ಧ ಮಾಲತೇಶ ದೇವಸ್ಥಾನದ ಬೆಟ್ಟದಲ್ಲಿ ಕಾರ್ಣಿಕೋತ್ಸವವು ಪ್ರತಿವರ್ಷದಂತೆ ಭಾರತ ಹುಣ್ಣಿಮೆ ದಿನವಾದ ಭಾನುವಾರ ನಡೆಯಿತು.

20 ಅಡಿ ಎತ್ತರದ ಬಿಲ್ಲನ್ನೇರಿದ ಗೊರವಪ್ಪ ಪ್ರಸ್ತುತ ವರ್ಷದ ಭವಿಷ್ಯವಾಣಿ, ‘ಭೂಮಂಡಲದಲ್ಲಿ ಮುತ್ತಿನಮಳೆ ಗರೀತಲೆ ಪರಾಕ್’ ಎಂದು ಕಾರ್ಣಿಕ ನುಡಿದ. ಕಾರ್ಣಿಕ ನುಡಿದ ಗೊರವಪ್ಪ ಕೆಳಗೆ ಧುಮುಕ್ಕಿದ್ದಂತೆ ಭಕ್ತರು ಗೊರವಪ್ಪ ಅವರನ್ನು ಹಿಡಿದರು.

ಕಲಕೇರಿ ಗ್ರಾಮದ ಗೊರವಯ್ಯ ಸ್ವಾಮೀ ಹನುಮಗೌಡರ ಅವರು ವರ್ಷದ ಭವಿಷ್ಯ ನುಡಿದಿದ್ದಾರೆ. ಪ್ರಸಕ್ತ ವರ್ಷದಲ್ಲಿ ಮಳೆ-ಬೆಳೆ ಸಮೃದ್ಧಿಯಾಗುತ್ತದೆ. ರಾಜ್ಯದ ರೈತರು ಉತ್ತಮ ಫಸಲು ಪಡೆಯುತ್ತಾರೆ ಎನ್ನುವ ವಿಶ್ಲೇಷಣೆಯನ್ನ ಗ್ರಾಮದ ಜನರು ಹಾಗೂ ಭಕ್ತರು ಅರ್ಚಕ ತೇಜಪ್ಪ ಪೂಜಾರ ಅಥೈಸಿಕೊಂಡಿದ್ದಾರೆ.

ಜಿಲ್ಲೆಯ ಪ್ರಮುಖ ಮೈಲಾರಲಿಂಗೇಶ್ವರ ದೇವಸ್ಥಾನಗಳಲ್ಲಿ ಆಡೂರು ಮಾಲತೇಶ ದೇವಸ್ಥಾನ ಸಹ ಒಂದು. ಇಲ್ಲಿ ಮೈಲಾರಲಿಂಗೇಶ್ವರನನ್ನು ಮಾಲತೇಶ, ಗುಡ್ಡದಯ್ಯ ಸೇರಿದಂತೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ನೂರಾರು ಭಕ್ತರು ದೈವವಾಣಿ ಕೇಳಿ ಪುನೀತರಾದರು.

Share This Article
Leave a Comment

Leave a Reply

Your email address will not be published. Required fields are marked *