ವಕ್ಫ್‌ ನೋಟಿಸ್‌ನಿಂದಲ್ಲ ಸಾಲಭಾದೆಯಿಂದ ರೈತ ರುದ್ರಪ್ಪ ಆತ್ಮಹತ್ಯೆ – ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ

Public TV
1 Min Read

ಹಾವೇರಿ: ವಕ್ಫ್‌ ನೋಟಿಸ್‌ನಿಂದ ರೈತ ಆತ್ಮಹತ್ಯೆ ಪ್ರಕರಣ ವದಂತಿಗೆ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ಕೊಟ್ಟಿದೆ. ವಕ್ಫ್‌ ನೋಟಿಸ್‌ನಿಂದ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಸ್ಪಷ್ಟಪಡಿಸಿದೆ.

ವಕ್ಫ್ ಅಂತಾ ನಮೂದಾದ ಹಿನ್ನೆಲೆ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿಲ್ಲ. ವಕ್ಫ್ ಎಂದು ನಮೂದಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಕರಣ ದಾಖಲಾಗಿರುವುದಿಲ್ಲ. ಆದರೆ, ರೈತ ಸಾಲಬಾಧೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪೊಲೀಸ್ ಇಲಾಖೆ ಹಾಗೂ ಹಾವೇರಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ನಿನ್ನೆ ಹುಬ್ಬಳ್ಳಿಯಲ್ಲಿ ವಕ್ಫ್ ಕಾಯಿದೆ ತಿದ್ದುಪಡಿ ಜಂಟಿ ಸದನ ಸಮಿತಿಗೆ ಮೃತ ರೈತ ಚೆನ್ನಪ್ಪ ಕುಟುಂಬಸ್ಥರು ಮನವಿ ಮಾಡಿದ್ದರು. ವಕ್ಫ್ ಬೋರ್ಡ್‌ನಿಂದ ಅನ್ಯಾಯ ಆಗಿರೋದಾಗಿ ದೂರು ನೀಡಿದ್ದರು. ಆದರೆ, ವಕ್ಫ್ ಎಂದು ನಮೂದಾಗಿದ್ದಕ್ಕೆ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ತಿಳಿಸಿದೆ.

ಹರನಗಿ ಗ್ರಾಮದ ನಿವಾಸಿ ರುದ್ರಪ್ಪ 2022ರಲ್ಲಿ ಆತ್ಮಹತ್ಯೆಗೆ ಶರಣಾದರು. ವಕ್ಫ್‌ ವಿವಾದದ ಹಿನ್ನೆಲೆ ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದ ವಕ್ಫ್‌ ಸಂಸದೀಯ ಜಂಟಿ ಸಮಿತಿ ಮುಂದೆ ರೈತರು ಹಾಗೂ ರುದ್ರಪ್ಪ ಕುಟುಂಬಸ್ಥರು ಮನವಿಯೊಂದನ್ನು ಸಲ್ಲಿಸಿದ್ದರು. ವಕ್ಫ್‌ ಬೋರ್ಡ್‌ನವರು ನಮ್ಮ ಜಮೀನನ್ನು ವಶಪಡಿಸಿಕೊಂಡಿದ್ದರಿಂದ ರುದ್ರಪ್ಪ ಕಂಗಾಲಾಗಿದ್ದ. ಅದೇ ನೋವಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಎಂದು ಆರೋಪ ಮಾಡಿದ್ದರು.

Share This Article